CONNECT WITH US  

ರಾಜ್ಯಗಳಿಗೆ ಇದೆ ಪೆಟ್ರೋಲ್‌ ಬೆಲೆ ಇಳಿಕೆ ಅವಕಾಶ: ಎಸ್‌ಬಿಐ

ನವದೆಹಲಿ: ರಾಜ್ಯ ಸರ್ಕಾರಗಳು ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯನ್ನು ಲೀಟರ್‌ಗೆ ತಲಾ ರೂ. 5.75 ಮತ್ತು ರೂ. 3.75 ರಷ್ಟು ಇಳಿಸುವ ಅವಕಾಶವಿದೆ ಎಂದು ಭಾರತೀಯ ಸ್ಟೇಟ್‌ ಬ್ಯಾಂಕ್‌ ತನ್ನ ವರದಿಯಲ್ಲಿ ತಿಳಿಸಿದೆ. ಜಿಎಸ್‌ಟಿ ಜಾರಿಗೊಳಿಸಿರುವುದು ಹಾಗೂ ಕಚ್ಚಾ ತೈಲ ಬೆಲೆ ಏರಿಕೆಯಿಂದಾಗಿ 37,426 ಕೋಟಿ ರೂ. ಹೆಚ್ಚುವರಿ ಗಳಿಕೆ ರಾಜ್ಯಕ್ಕೆ ಲಭಿಸಿದ್ದು, ರಾಜ್ಯದ ಬೊಕ್ಕಸಕ್ಕೆ ಯಾವುದೇ ಹೊರೆಯಾಗದಂತೆ ದರ ಇಳಿಕೆ ಮಾಡಬಹುದಾಗಿದೆ ಎಂದು ಎಸ್‌ಬಿಐ ಸಂಶೋಧನಾ ವರದಿಯಲ್ಲಿ ವಿವರಿಸಲಾಗಿದೆ. 

24 ರಾಜ್ಯಗಳ ಪೈಕಿ ಗುಜರಾತ್‌, ಹರ್ಯಾಣ, ಮಹಾರಾಷ್ಟ್ರ ಸೇರಿದಂತೆ 16 ರಾಜ್ಯಗಳ ಆದಾಯವು ಶೇ. 14ರಷ್ಟು ಏರಿಕೆಯಾಗಿದೆ. ಇದರಿಂದ ಕಳೆದ ವರ್ಷವೇ ರಾಜ್ಯಗಳಿಗೆ ಜಿಎಸ್‌ಟಿಯಿಂದಾಗಿ 18 ಸಾವಿರ 700 ಕೋಟಿ ರೂ. ಹಾಗೂ ತೈಲ ಬೆಲೆ ಏರಿಕೆಯಿಂದ 18 ಸಾವಿರ 700 ಕೋಟಿ ರೂ. ಆದಾಯ ಹೆಚ್ಚುವರಿಯಾಗಿ ಹರಿದುಬಂದಿದೆ. ಆದರೆ ಕರ್ನಾಟಕ, ಪ.ಬಂಗಾಳ, ಉ.ಪ್ರ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಜಿಎಸ್‌ಟಿಯಿಂದಾಗಿ ತೆರಿಗೆ ಸಂಗ್ರಹ ಇಳಿಕೆಯಾಗಿದೆ. ಆದರೂ ನಷ್ಟದಲ್ಲಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರ ನಷ್ಟವನ್ನು ಭರಿಸಿಕೊಡಲಿದೆ.


Trending videos

Back to Top