CONNECT WITH US  

ಕಚ್ಚಾ ತೈಲೋತ್ಪಾದನೆ ವೃದ್ಧಿಗೆ ಅಸ್ತು: ತೈಲ ದರ ಇಳಿಕೆ?

ವಿಯೆನ್ನಾ: ಮುಂದಿನ ತಿಂಗಳಿನಿಂದ ಭಾರತದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಇಳಿಕೆಯಾದರೂ ಅಚ್ಚರಿ ಇಲ್ಲ. ತೈಲೋತ್ಪಾದಕ ರಾಷ್ಟ್ರಗಳ ಒಕ್ಕೂಟ (ಒಪೆಕ್‌) ಶುಕ್ರವಾರ ನಡೆಸಿದ ಸಭೆಯಲ್ಲಿ ಕಚ್ಚಾ ತೈಲ ಉತ್ಪಾದನೆಯ ಪ್ರಮಾಣವನ್ನು ಜು.1ರಿಂದ ಪ್ರತಿ ದಿನ 10 ಲಕ್ಷ ಬ್ಯಾರೆಲ್‌ಗೆ ಹೆಚ್ಚಿಸಲು ಒಪ್ಪಿಕೊಂಡಿವೆ. ಅದಕ್ಕೆ ರಷ್ಯಾ ಕೂಡ ಸಹಮತ ವ್ಯಕ್ತಪಡಿಸಿದೆ. 

ಭಾರತ ಈ ಬಗ್ಗೆ ಒಪೆಕ್‌ ರಾಷ್ಟ್ರಗಳ ಮೇಲೆ ಭಾರಿ ಒತ್ತಡ ಹೇರಿತ್ತು. ಅದಕ್ಕೆ ಅಮೆರಿಕ ಮತ್ತು ಚೀನಾ ಬೆಂಬಲ ನೀಡಿದ್ದವು. ಮೂರನೇ ಅತಿ ದೊಡ್ಡ ಕಚ್ಚಾ ತೈಲ ಉತ್ಪಾದಕ ರಾಷ್ಟ್ರ ಇರಾನ್‌ ಅಸಮ್ಮತಿ ಸೂಚಿಸಿದರೂ, ಸೌದಿ ಅರೇಬಿಯಾ ಈ ಬಗ್ಗೆ ಮನವೊಲಿಕೆಯಲ್ಲಿ ಯಶಸ್ವಿಯಾಗಿದೆ.

ಇನ್ನು ಭಾರತದ ಮೇಲಾಗುವ ಪರಿಣಾಮದ ಬಗ್ಗೆ ಹೇಳುವುದಾದರೆ, ಇತ್ತೀಚಿನ ದಿನಗಳಲ್ಲಿ ತೈಲೋತ್ಪನ್ನಗಳ ದರ ಏರಿಕೆ ಭಾರಿ ಟೀಕೆಗೆ ಕಾರಣವಾಗಿತ್ತು. 

ಹೆಚ್ಚಿನ ಪ್ರಮಾಣದಲ್ಲಿ ಕಚ್ಚಾ ತೈಲ ಉತ್ಪಾದನೆಯಾಗುವುದರಿಂದ ದೇಶಿ ಮಾರುಕಟ್ಟೆಯಲ್ಲಿಯೂ ದರ ಇಳಿಕೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿ ಲೀ. ಪೆಟ್ರೋಲ್‌ ದರ 77.25 ರೂ. ಡೀಸೆಲ್‌ಗೆ 68.87 ರೂ. ಆಗಿತ್ತು.


Trending videos

Back to Top