CONNECT WITH US  

ಖರ್ಗೆಗೆ ಮಹಾ ಉಸ್ತುವಾರಿ

ಮುಂಬೈ: ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಹಾರಾಷ್ಟ್ರ ಕಾಂಗ್ರೆಸ್‌ ಉಸ್ತುವಾರಿ ಜವಾಬ್ದಾರಿ ನೀಡಲಾಗಿದೆ. ಕಳೆದ ಒಂಬತ್ತು ವರ್ಷದಿಂದ ಈ ಹುದ್ದೆ ನಿರ್ವಹಿಸಿದ್ದ ಮೋಹನ್‌ ಪ್ರಕಾಶ್‌ರನ್ನು ತೆರವುಗೊಳಿಸಲಾಗಿದೆ. ಅಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್‌ನಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಲಾಗಿದೆ. 

ಗುಜರಾತ್‌ನ ಸೋನಲ್‌ ಪಟೇಲ್‌, ಹರ್ಯಾಣದ ಆಶಿಶ್‌ ದುವಾ ಮತ್ತು ತೆಲಂಗಾಣದ ಸಂಪತ್‌ ಕುಮಾರ್‌ರನ್ನೂ ಮಹಾರಾಷ್ಟ್ರಕ್ಕೆ ಎಐಸಿಸಿ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ. ರಾಹುಲ್‌ ಗಾಂಧಿ ಪಕ್ಷದ ಅಧ್ಯಕ್ಷ ಹುದ್ದೆಗೇರಿ ದಂದಿನಿಂದಲೂ ಮಹಾರಾಷ್ಟ್ರ ಕಾಂಗ್ರೆಸ್‌ ಪುನಶ್ಚೇತನಗೊಳಿಸುವ ಯೋಚನೆ ಹೊಂದಿದ್ದರು. ಖರ್ಗೆ ನೇಮಕವನ್ನು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ಅಶೋಕ್‌
ಚವಾಣ್‌ ಸ್ವಾಗತಿಸಿದ್ದು, 2014ರ ಲೋಕಸಭೆಯಲ್ಲಿ ಅವರು  ಪಕ್ಷದ ಜವಾಬ್ದಾರಿ ಹೊಂದಿದ್ದರು ಎಂದಿದ್ದಾರೆ. 

Trending videos

Back to Top