ಶೀಘ್ರ ಸೇನೆಗೆ ಅಗ್ನಿ 5 ಬಲ
Team Udayavani, Jul 2, 2018, 12:40 PM IST
ಹೊಸದಿಲ್ಲಿ: ದೇಶದ ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಅಗ್ನಿ-5 ಭಾರತೀಯ ಸೇನೆಗೆ ಶೀಘ್ರ ಸೇರ್ಪಡೆಯಾಗಲಿದೆ. 5 ಸಾವಿರ ಕಿ.ಮೀ. ದೂರದ ಗುರಿ ತಲುಪಬಲ್ಲ ಹಾಗೂ ಅಣ್ವಸ್ತ್ರ ಸಿಡಿತಲೆ ಗಳನ್ನು ಹೊತ್ತೂಯ್ಯವ ಸಾಮರ್ಥ್ಯದ ಈ ಕ್ಷಿಪಣಿಯು ಭಾರತೀಯ ಸೇನೆ ಯನ್ನು ಮತ್ತಷ್ಟು ಸದೃಢಗೊಳಿಸಲಿದೆ. 5 ಸಾವಿರ ಕಿ.ಮೀ. ಅಂದರೆ ಚೀನದ ಬೀಜಿಂಗ್, ಶಾಂಘೈ, ಹಾಂಕಾಂಗ್ಗೆ ತಲುಪುವಷ್ಟು ನಿಖರ ಗುರಿಯನ್ನು ಹೊಂದಿರುವ ಈ ಕ್ಷಿಪಣಿಯನ್ನು ತಂತ್ರಕುಶಲತೆ ಪಡೆ ಕಮಾಂಡ್ (ಎಸ್ಎಫ್ಸಿ)ಗೆ ಹಸ್ತಾಂತರ ಮಾಡಲಾಗುವುದು. ಇದು ಸೇನೆಯ ಬತ್ತಳಿಕೆಯಲ್ಲಿ ಮಹತ್ವದ ಆಯುಧವಾಗಿದೆ. ಇಂತಹ ಕ್ಷಿಪಣಿಯನ್ನು ಅಮೆರಿಕ, ಚೀನ, ರಷ್ಯಾ, ಫ್ರಾನ್ಸ್ ಹಾಗೂ ಉತ್ತರ ಕೊರಿಯಾ ಮಾತ್ರ ಹೊಂದಿವೆ. ಈ ಮೂಲಕ ಭಾರತ ರಕ್ಷಣಾ ಕ್ಷೇತ್ರದಲ್ಲಿ ಜಾಗತಿಕ ಸ್ಥಾನ ಪಡೆಯಲಿದೆ.
ನೌಕಾಯಾನ ಹಾಗೂ ಅಣ್ವಸ್ತ್ರ ಸಿಡಿತಲೆ ಹೊತ್ತೂಯ್ಯವಲ್ಲಿ ಮುಂದುವ ರಿದ ತಂತಜ್ಞಾನ ಹೊಂದಿರುವ ಈ ಕ್ಷಿಪಣಿ ಪರೀಕ್ಷೆಯನ್ನು ಕಳೆದ ತಿಂಗಳು ಒಡಿಶಾದ ಕರಾವಳಿಯಲ್ಲಿ ಯಶಸ್ವಿಯಾಗಿ ನಡೆಸಲಾಗಿತ್ತು. ಇನ್ನಷ್ಟು ಪರೀಕ್ಷೆ ನಡೆಸಬೇಕಿದ್ದು, ಇದು ಪೂರ್ಣಗೊಂಡ ಬಳಿಕ ಸೇನೆ ಸೇರಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು