CONNECT WITH US  

ದೇಶದ ಒಟ್ಟಾರೆ ಸಾಲ ಮನ್ನಾ 2.8 ಲಕ್ಷ ಕೋಟಿ

ನವದೆಹಲಿ: ಕರ್ನಾಟಕ ಸರ್ಕಾರ 34 ಸಾವಿರ ಕೋಟಿ ರೂ. ಸಾಲ ಮನ್ನಾ ಘೋಷಿಸಿದ ನಂತರದಲ್ಲಿ ಮುಂದಿನ 2019ರ ಲೋಕಸಭೆ ಚುನಾವಣೆಯ ವೇಳೆಗೆ ದೇಶದ ಒಟ್ಟು ಸಾಲ ಮನ್ನಾ ಮೊತ್ತ 2.8 ಲಕ್ಷ ಕೋಟಿ ರೂ.ಗೆ ಏರಿಕೆಯಾಗಲಿದೆ ಎಂದು ಅಮೆರಿಕದ ಮೆರಿಲ್‌ ಲಿಂಚ್‌ ಬ್ಯಾಂಕ್‌ ವರದಿ ಮಾಡಿದೆ.

2019ರ ಲೋಕಸಭೆ ಚುನಾವಣೆಯೊಳಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರನ್ನುಓಲೈಸಲು ಹೊರಟಿವೆ. ಸಾಲ ಮನ್ನಾ ಜಿಡಿಪಿಯ ಶೇ. 1.5 ಆಗಿದ್ದು, ಇದು 2018-20ರ ಅವಧಿಯಲ್ಲಿ ರೈತರ ಆದಾಯದಲ್ಲಿ ಶೇ. 3ರಷ್ಟು ಹೆಚ್ಚಳ ಮಾಡಲಿದೆ. ಇನ್ನೊಂದೆಡೆ ಕನಿಷ್ಠ ಬೆಂಬಲ ಬೆಲೆ
ಏರಿಕೆಯಿಂದಾಗಿ ಈ ಮುಂಗಾರಿನಲ್ಲೇ ರೈತರ ಆದಾಯವನ್ನು ಶೇ. 10ರಷ್ಟು ಏರಿಸಲಿದೆ ಎಂದು ವರದಿಯಲ್ಲಿ ನಿರೀಕ್ಷಿಸಲಾಗಿದೆ. ಆದರೆ ವಿತ್ತೀಯ ಕೊರತೆ ಮತ್ತು ಹಣದುಬ್ಬರದ ಗುರಿಯ ಜೊತೆಗೇ 2022ರ ವೇಳೆಗೆ ರೈತರ ಆದಾಯವ ನ್ನೂ ಏರಿಸುವ ಸರ್ಕಾರದ ಗುರಿ ಸಾಧಿಸುವುದು
ಕಷ್ಟ ಎಂದು ವರದಿ ಹೇಳಿದೆ.

Trending videos

Back to Top