CONNECT WITH US  

ಏರಿಕೆೆ ಹಾದಿಯಲ್ಲಿ ಸೆನ್ಸೆಕ್ಸ್‌

ಮುಂಬಯಿ: ಸತತ ಮೂರನೇ ದಿನವೂ ಏರಿಕೆ ಕಂಡಿರುವ ಮುಂಬಯಿ ಷೇರುಪೇಟೆ ಮತ್ತೆ 36 ಸಾವಿರದ ಗಡಿ ದಾಟಿದೆ. ಮಂಗಳವಾರ ಸೆನ್ಸೆಕ್ಸ್‌ 305 ಅಂಶಗಳಷ್ಟು ಏರಿಕೆ ಕಂಡಿದ್ದು, ನಿಫ್ಟಿ ಕೂಡ 10,900ಕ್ಕೂ ಮೇಲೇರಿ ದಿನದ ವಹಿವಾಟು ಮುಗಿಸಿದೆ. ಆರೋಗ್ಯ ವಲಯ ಹೊರತುಪಡಿಸಿದಂತೆ ವಿದ್ಯುತ್‌, ರಿಯಲ್‌ ಎಸ್ಟೇಟ್‌ ಮತ್ತು ಟೆಲಿಕಾಂ ವಲಯದ ಷೇರುಗಳೂ ಉತ್ತಮ ಏರಿಕೆ ಕಂಡವು. ನಿಫ್ಟಿಯಲ್ಲೂ 94.35 ಅಂಶಗಳಷ್ಟು ಏರಿಕೆಯಾಗಿ ದಿನದ ಅಂತ್ಯಕ್ಕೆ 10,956ಕ್ಕೆ ವಹಿವಾಟು ಅಂತ್ಯಗೊಂಡಿದೆ.

Trending videos

Back to Top