1 ಕೋಟಿ ನಗದು ಮಿತಿಗೆ ಎಸ್ಐಟಿ ಸಲಹೆ
Team Udayavani, Jul 20, 2018, 6:00 AM IST
ಅಹಮದಾಬಾದ್: ಕಪ್ಪು ಹಣದ ಮೇಲಿನ ವಿಶೇಷ ತನಿಖಾ ತಂಡ (ಎಸ್ಐಟಿ) ನಗದು ಹೊಂದುವ ಮಿತಿಯನ್ನು 1 ಕೋಟಿ ರೂ.ಗೆ ನಿಗದಿಸುವಂತೆ ಸಲಹೆ ಮಾಡಿದೆ. ಈ ಹಿಂದೆ ಎಸ್ಐಟಿ 20 ಲಕ್ಷ ರೂ.ಗೆ ಮಿತಿಗೊಳಿಸುವಂತೆ ಹೇಳಿತ್ತು. ಈ ಮಿತಿಗಿಂತ ಹೆಚ್ಚಿರುವ ಮೊತ್ತವನ್ನು ಜಪ್ತಿ ಮಾಡಿದರೆ, ಈ ಮೊತ್ತ ಸರ್ಕಾರಕ್ಕೆ ಸೇರಬೇಕು ಎಂದೂ ಎಸ್ಐಟಿ ಶಿಫಾರಸು ಮಾಡಿದೆ. ತಂಡದ ಮುಖ್ಯಸ್ಥ ನಿವೃತ್ತ ನ್ಯಾಯಮೂರ್ತಿ ಎಂ ಬಿ ಷಾ ಈ ವರದಿ ನೀಡಿದ್ದು, ಈ ಹಿಂದೆ ಇದೇ ಸಮಿತಿ 15 ಲಕ್ಷದಿಂದ ರೂ. 20 ಲಕ್ಷ ರೂ.ವರೆಗೆ ನಗದು ಮಿತಿಯನ್ನು ಶಿಫಾರಸು ಮಾಡಿತ್ತು.
ಸದ್ಯ ಜಪ್ತಿ ಮಾಡಿದಾಗ ತೆರಿಗೆ ಕಳ್ಳತನ ಸಾಬೀತಾದರೆ ಜಪ್ತಿ ಮಾಡಿದ ನಗದು ಮೊತ್ತದ ಶೇ.40ರಷ್ಟು ಆದಾಯ ತೆರಿಗೆ ಹಾಗೂ ದಂಡ ವಿಧಿಸಲಾಗುತ್ತಿತ್ತು. ಇತ್ತೀಚೆಗೆ ತಮಿಳುನಾಡಿನಲ್ಲಿ 20 ಸ್ಥಳಗಳಲ್ಲಿ ನಿರ್ಮಾಣ ಸಂಸ್ಥೆಯ ಕಚೇರಿ ಮೇಲೆ ನಡೆಸಿದ ದಾಳಿಯಲ್ಲಿ 16 ಕೋಟಿ ರೂ. ನಗದು ಮತ್ತು 100 ಕಿ.ಲೋ ಚಿನ್ನ ವಶಪಡಿಸಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ 15 ಅಥವಾ 20 ಲಕ್ಷ ಮಿತಿ ತುಂಬಾ ಕಡಿಮೆಯಾಯಿತು ಎನಿಸುತ್ತದೆ ಎಂದು ಷಾ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
RBI: ಏಪ್ರಿಲ್ 1 ರಂದು 2,000 ರೂ ಆರ್ ಬಿಐನಲ್ಲಿ ನೋಟುಗಳ ವಿನಿಮಯ/ಠೇವಣಿ ಸಾಧ್ಯವಿಲ್ಲ
Delhi CM Arvind Kejriwalಗೆ ಮತ್ತೆ 4 ದಿನ ಇ.ಡಿ. ಕಸ್ಟಡಿ
ಬಿಲ್ ಗೇಟ್ಸ್ ಜತೆ ಮಾತುಕತೆಯಲ್ಲಿ ಪ್ರಧಾನಿ ಮೋದಿ ಎಐ ಚರ್ಚೆ
Jammu-Srinagar National Highway; ಕಮರಿಗೆ ಉರುಳಿದ ಟ್ಯಾಕ್ಸಿ; ಹತ್ತು ಜನರು ಸಾವು