ಕೋಮಾದಿಂದ ತಾಯಿಯ ಹೊರತಂದ ಮಗು
Team Udayavani, Jul 20, 2018, 6:00 AM IST
ತಿರುವನಂತಪುರಂ: ಮೂರು ತಿಂಗಳ ಗರ್ಭಿಣಿಯಾದಾಗಲೇ ವಿಪರೀತ ಅನಾರೋಗ್ಯದಿಂದ ಕೋಮಾಗೆ ಹೋಗಿದ್ದ ಕೇರಳದ ಕೊಟ್ಟಾಯಂನ 28 ವರ್ಷದ ಮಹಿಳೆ ಮಗುವಿಗೆ ಜನ್ಮ ನೀಡಿದ ನಂತರದಲ್ಲಿ ಭಾರಿ ಚೇತರಿಕೆ ಕಾಣುತ್ತಿದ್ದಾರೆ. ಕೋಮಾದಲ್ಲಿದ್ದರೂ ಮಗು ಅತ್ತಾಗ ಮಗುವಿನ ಕಡೆಗೆ ಮುಖ ತಿರುಗಿಸುತ್ತಾರೆ. ಅಷ್ಟೇ ಅಲ್ಲ, ಮಗು ಅತ್ತಾಗ ತಾಯಿಯ ಕಣ್ಣಲ್ಲೂ ನೀರು ಜಿನುಗುತ್ತದೆ. ಜೂನ್ 14ರಂದು ಶಸ್ತ್ರಚಿಕಿತ್ಸೆಯ ಮೂಲಕ ಹೆರಿಗೆ ಮಾಡಿಸಲಾಗಿದ್ದು, ಅಂದಿನಿಂದಲೂ ಬೆಟ್ಟೆನಾ ಚೇತರಿಸಿಕೊಳ್ಳುತ್ತಿದ್ದಾರೆ.
ತಾಯಿಯ ಎದೆ ಹಾಲುಡಿಸಲಾಗುತ್ತಿದ್ದು, ಇದರಿಂದಾಗಿ ಈ ಚೇತರಿಕೆ ಕಂಡುಬರುತ್ತಿದೆ ಎನ್ನಲಾಗಿದೆ. ಎದೆಹಾಲುಡಿಸುವುದಕ್ಕಾಗಿ ಬೆಟ್ಟೆನಾ ಬಳಿ ಮಗುವನ್ನು ಹಿಡಿದಾಗ ಆಕೆಯ ಮುಖದಲ್ಲಿ ಖುಷಿ ಎದ್ದು ಕಾಣುತ್ತಿತ್ತು. ಹೀಗಾಗಿ ಬೆಟ್ಟೆನಾ ಶೀಘ್ರದಲ್ಲೇ ಚೇತರಿಸಿಕೊಳ್ಳುವ ಭರವಸೆ ಮೂಡಿದೆ ಎಂದು ಆಕೆಯ ಪತಿ ಅನೂಪ್ ಹೇಳಿದ್ದಾರೆ. ಬೆಟ್ಟೆನಾ 3 ತಿಂಗಳ ಗರ್ಭಿಣಿಯಿದ್ದಾಗ ಮಿದುಳಿಗೆ ಹಾನಿಯುಂಟಾಗಿತ್ತು. ಅಂದಿನಿಂದಲೂ ಆಕೆ ಕೋಮಾಗೆ ಹೋಗಿದ್ದು, ಚೇತರಿಸಿಕೊಳ್ಳುವುದಕ್ಕೆ ವೈದ್ಯರು ವಿವಿಧ ರೀತಿಯ ಚಿಕಿತ್ಸೆ ನೀಡುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು