4 ದಿನ ಒತ್ತೆಸೆರೆ: ವಿವಾಹಿತೆಯ ಮೇಲೆ 40 ಮಂದಿಯಿಂದ ರೇಪ್
Team Udayavani, Jul 20, 2018, 7:27 PM IST
ಚಂಡೀಗಢ : “ಹರಿಯಾಣದ ಪಂಚಕುಲ ಜಿಲ್ಲೆಯ ಮೋರ್ನಿ ಪ್ರದೇಶದಲ್ಲಿನ ಗೆಸ್ಟ್ ಹೌಸ್ನಲ್ಲಿ ನನ್ನನ್ನು ಬಂಧಿಯಾಗಿರಿಸಿ ಸುಮಾರು 40 ಜನರು ನಿರಂತರ ನಾಲ್ಕು ದಿನಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ’ ಎಂದು 22ರ ಹರೆಯದ ಚಂಡೀಗಢದ ವಿವಾಹಿತ ಮಹಿಳೆಯೋರ್ವಳು ನೀಡಿರುವ ದೂರನ್ನು ಅನುಸರಿಸಿ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಮಹಿಳೆಯ ಪತಿಯು, “ನನ್ನ ಪತ್ನಿಗೆ ಉದ್ಯೋಗದ ಭರವಸೆ ನೀಡಲಾಗಿತ್ತು. ಆಕೆಯನ್ನು ನಮಗೆ ತಿಳಿದಿರುವ ಓರ್ವ ವ್ಯಕ್ತಿ ಗೆಸ್ಟ್ ಹೌಸ್ಗೆ ಕರೆದೊಯ್ದಿದ್ದರು. ಅಲ್ಲಿ ಆಕೆಗೆ ಮಾದಕ ವಸ್ತುವನ್ನು ಉಣಿಸಲಾಯಿತು. ನಾಲ್ಕು ದಿನಗಳ ಕಾಲ ಆಕೆಯನ್ನು ಅಲ್ಲಿ ಒತ್ತೆಸೆರೆಯಲ್ಲಿ ಇರಿಸಿಕೊಳ್ಳಲಾಗಿತ್ತು ಮತ್ತು ಆರೋಪಿಗಳು ಆಕೆಯ ಮೇಲೆ ಸರದಿ ಪ್ರಕಾರ ಅತ್ಯಾಚಾರ ನಡೆಸಿದರು. ನನಗೆ ಮತ್ತು ನನ್ನ ಪತ್ನಿಗೆ ಜೀವ ಬೆದರಿಕೆ ಒಡ್ಡಲಾಗಿತ್ತು’ ಎಂದು ಹೇಳಿದರು.
ಮಣಿಮಾಜ್ರಾ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿಕೊಂಡ ಚಂಡೀಗಢ ಪೊಲೀಸರು ಅನಂತರ ಕೇಸನ್ನು ಪಂಚಕುಲ ಪೊಲೀಸರಿಗೆ ಹಸ್ತಾಂತರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್