CONNECT WITH US  

ಗ್ರಹಣದ ಕೆಂಪು ಚಂದಿರ ಸುಂದರ: ಕರ್ನಾಟಕದಲ್ಲೂ ಗೋಚರ

ಹೊಸದಿಲ್ಲಿ : ಶುಕ್ರವಾರ ತಡ ರಾತ್ರಿ 11.54ರ ವೇಳೆಗೆ ಆರಂಭಗೊಂಡ ಚಂದ್ರ ಗ್ರಹಣವು ನಸುಕಿನ 3.49ರ ವೇಳೆಗೆ ಮುಕ್ತಾಯಗೊಂಡಿತು. ಮಧ್ಯರಾತ್ರಿ ಆಗಸದಲ್ಲಿನ ಕೆಂಪು ಚಂದಿರನನ್ನು ಖಗೋಳಾಸಕ್ತರು ಕಣ್ತುಂಬಿಕೊಂಡರು.

ಭಾರತದಲ್ಲೂ ಗ್ರಹಣ ಗೋಚರವಾಗಿದ್ದು, ಆಸಕ್ತರು ಕಣ್‌ತುಂಬಿಕೊಂಡರು. ವಿವಿಧೆಡೆ ಚಂದ್ರಮನ ಚಿತ್ರಗಳನ್ನು ಸೆರೆ ಹಿಡಿಯಲಾಗಿದ್ದು ವಿವಿಧ ಬಣ್ಣಗಳಿಂದ ಹುಣ್ಣಿಮೆ ರಾತ್ರಿಯಲ್ಲಿ ಕಂಗೊಳಿಸಿದ್ದಾನೆ. ಕೆಲವೆಡೆ ಕೆಂಪಾಗಿ ರಕ್ತ ಚಂದಿರ ನಾದರೆ, ನೀಲಿ, ಕಿತ್ತಳೆ, ಕಡು ಕಪ್ಪಾಗಿ ಕಂಡು ಬಂದಿದ್ದಾನೆ. 

ಕೆಲವೆಡೆ ಖಗೋಲಾಸಕ್ತರಿಗೆ ದಟ್ಟ ಮೋಡಗಳು ಚಂದಿರನಿಗೆ ತಡೆಯಾದವು.ದೆಹಲಿ, ಚೆನ್ನೈ, ಬೆಂಗಳೂರು  ಕೊಪ್ಪಳ, ದಾವಣಗೆರೆಯಲ್ಲಿ ಚಂದ್ರನ ದರ್ಶನವಾಗಿರುವ ಬಗ್ಗೆ ವರದಿಯಾಗಿದೆ. 

ಗ್ರೀಕ್‍, ಇಸ್ರೇಲ್, ಅಬುದಾಭಿ, ಸ್ವಿಟ್ಜರ್ಲೆಂಡ್, ಆಫ್ರಿಕಾದ ಕೆಲ ದೇಶಗಳಲ್ಲೂ ಗ್ರಹಣದ ರಕ್ತ ಚಂದಿರ ಕಂಡು ಬಂದಿದ್ದಾನೆ. 

Trending videos

Back to Top