CONNECT WITH US  

ರಾಜ್ಯಕ್ಕಿಂತ ಮ.ಪ್ರದೇಶದಲ್ಲಿ ಅತ್ಯಧಿಕ ಹುಲಿಗಳು?

ಅಂತಾರಾಷ್ಟ್ರೀಯ ಹುಲಿ ದಿನವಾದ ಭಾನುವಾರ ಮೈಸೂರಿನ ಮೃಗಾಲಯದಲ್ಲಿ ಪ್ರವಾಸಿಗರಿಗೆ ಕಂಡ ವ್ಯಾಘ್ರ.

ಭೋಪಾಲ/ನವದೆಹಲಿ: ದೇಶದಲ್ಲಿ ಅತ್ಯಂತ ಹೆಚ್ಚು ಹುಲಿಗಳನ್ನು ಹೊಂದಿದ ರಾಜ್ಯ ಎಂಬ ಹೆಗ್ಗಳಿಕೆ ಕರ್ನಾಟಕಕ್ಕೆ ಇತ್ತಾದರೂ, ಶೀಘ್ರದಲ್ಲಿಯೇ ಅದು ಮಧ್ಯಪ್ರದೇಶದ ಪಾಲಾಗಲಿದೆ. ಆ ರಾಜ್ಯದ ಅರಣ್ಯ ಸಂಶೋಧಾ ಸಂಸ್ಥೆ (ಎಸ್‌ಎಫ್ಆರ್‌ಐ) ನೀಡಿದ ಮಾಹಿತಿ ಪ್ರಕಾರ 2014ರಲ್ಲಿ ಮಧ್ಯಪ್ರದೇಶದಲ್ಲಿ 714 ಹುಲಿಗಳು ಇದ್ದವು. ಪ್ರಸಕ್ತ
ವರ್ಷ ಆ ಸಂಖ್ಯೆ 1,432ಕ್ಕೆ ಏರಿಕೆಯಾಗಿದೆ.

ಮಧ್ಯಪ್ರದೇಶದಲ್ಲಿ ನಡೆಸಲಾಗಿರುವ ಮೊದಲ ಹಂತದ ಹುಲಿ ಗಣತಿಯ ಮಾಹಿತಿಯಲ್ಲಿ ಈ ಹೆಚ್ಚಳ ಕಂಡು ಬಂದಿದೆ ಎಂದು ಅಲ್ಲಿನ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಶಭಾಜ್‌ ಅಹ್ಮದ್‌ ಹೇಳಿದ್ದಾರೆ.

2014ರಲ್ಲಿ ಕರ್ನಾಟಕದಲ್ಲಿ 406,ಉತ್ತರಾಖಂಡದಲ್ಲಿ 340, ಮಧ್ಯಪ್ರದೇಶದಲ್ಲಿ 308 ಹುಲಿಗಳು ಇದ್ದವು. ಕ್ಯಾಮೆರಾ
ಮೂಲಕ ಸೆರೆ ಹಿಡಿಯಲಾಗಿರುವ ಹುಲಿಗಳ ಫೋಟೋಗಳು ಹಿಂದಿನ ಸಂಖ್ಯೆಗಿಂತ ಮತ್ತು ಕರ್ನಾಟಕ, ಉತ್ತರಾಖಂಡಕ್ಕಿಂತ ಹೆಚ್ಚಾಗಿದೆ ಎಂದು ಅಹ್ಮದ್‌ ಹೇಳಿದ್ದಾರೆ.

ಡೆಹ್ರಾಡೂನ್‌ನಲ್ಲಿರುವ ವೈಲ್ಡ್‌ಲೈಫ್ ಇನಿrಟ್ಯೂಟ್‌ ಆಫ್ ಇಂಡಿಯಾ (ಡಬ್ಲೂéಐಐ) ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ದೇಶಾದ್ಯಂತ ಹುಲಿಗಣತಿ ನಡೆಸುತ್ತದೆ.

ಬಫ‌ರ್‌ ಝೋನ್‌ಗಳಲ್ಲಿ 2009-10ನೇ ಸಾಲಿನಲ್ಲಿ 1 ಸಾವಿರ ಜಾನುವಾರುಗಳು ಹುಲಿಗಳಿಂದಾಗಿ ಅಸುನೀಗಿವೆ. ಅದು 2017-18ನೇ ಸಾಲಿನಲ್ಲಿ 3 ಸಾವಿರಕ್ಕೆ ಏರಿಕೆಯಾಗಿವೆ ಎಂದು ಅವರು ಹೇಳಿದ್ದಾರೆ.

ಸಂರಕ್ಷಣೆಗೆ ಹಲವು ಕ್ರಮಗಳು
ದೇಶದಲ್ಲಿ ಹುಲಿಗಳ ಸಂರಕ್ಷಣೆಗೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ ಎಂದು ಅರಣ್ಯ ಸಚಿವ ಡಾ.ಹರ್ಷವರ್ಧನ್‌ ತಿಳಿಸಿದ್ದಾರೆ.

ಹುಲಿಗಳಿಗೆ ಪ್ರಾಕೃತಿಕವಾಗಿ ವಾಸಸ್ಥಾನ ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳ ಪೈಕಿ ಭಾರತ ಕೂಡ ಸೇರಿದೆ. ಅದು ನಮ್ಮ ದೇಶದ ಸಂಸ್ಕೃತಿಯಲ್ಲೂ ಸೇರಿದೆ.

ಹೀಗಾಗಿ ಅವುಗಳ ರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಭಾನುವಾರ ಅಂತಾರಾಷ್ಟ್ರೀಯ ಹುಲಿ ದಿನ ಪ್ರಯುಕ್ತ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ.

Trending videos

Back to Top