CONNECT WITH US  

ಆಸ್ಪತ್ರೆಯಲ್ಲಿ  ಮಂತ್ರವೇ ಮದ್ದು

ಬಿಹಾರದ ಆರೋಗ್ಯ ಕೇಂದ್ರವೊಂದರ ಸ್ಥಿತಿಯಿದು!
ಆಸ್ಪತ್ರೆಗೆ ಪ್ರವೇಶಿಸುವ ಮಂತ್ರವಾದಿ ಗಳಿಂದ ರೋಗಿಗಳಿಗೆ ಚಿಕಿತ್ಸೆ 
ಸ್ಥಳೀಯರ ನಂಬಿಕೆಯಿಂದ ಆಸ್ಪತ್ರೆಯೀಗ ಮಂತ್ರವಾದಿಗಳ ಅಡ್ಡ
ಭೀತಿಯಿಂದ ತಡೆಯಲು ಮುಂದೆ ಬಾರದ ಆಸ್ಪತ್ರೆ ಆಡಳಿತ ಮಂಡಳಿ

ಪಟ್ನಾ: ಸಾಮಾನ್ಯವಾಗಿ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುವ ಔಷಧಗಳು ಸಕಾಲಕ್ಕೆ ಸಿಗದಿದ್ದರೆ ಜನ ಗಲಾಟೆ ಮಾಡುವುದು ಸಹಜ. ಆದರೆ, ಬಿಹಾರದ ವೈಶಾಲಿ ಜಿಲ್ಲೆಯ ಮನ್ಹಾರ್‌ ಪ್ರಾಂತ್ಯದ ಲ್ಲೊಂದು ಸಮುದಾಯ ಆರೋಗ್ಯ ಕೇಂದ್ರ ವಿದ್ದು, ಅಲ್ಲಿ ವೈದ್ಯರ ಬದಲಿಗೆ ಮಂತ್ರವಾದಿ ಗಳೇ ರೋಗಿಗಳನ್ನು ವಾಸಿ ಮಾಡುತ್ತಾರೆ! ಜನ ರೋಗಿಗಳನ್ನು ಅಲ್ಲಿಗೆ ದಾಖಲು ಮಾಡಿಸುತ್ತಾರಷ್ಟೇ, ಮುಂದಿನದ್ದೆಲ್ಲ ಮಂತ್ರವಾದಿಗಳೇ ನೋಡಿಕೊಳ್ಳುತ್ತಾರೆ. ಹಾಗಾಗಿ, ಆ ಆಸ್ಪತ್ರೆಯ ಯಾವುದೇ ವಾರ್ಡಿಗೆ ಹೋದರೂ ಹಾಂ... ಹ್ರೀಂ...  ಮಂತ್ರ ಅನುರಣಿಸುತ್ತದೆ. 

ಇದಕ್ಕೆ ಸಾಕ್ಷಿಯೆಂಬಂತೆ, ಹಾವು ಕಚ್ಚಿದ ಮಹಿಳೆಯೊಬ್ಬರಿಗೆ ಈ ಆಸ್ಪತ್ರೆಯಲ್ಲಿ ಮಂತ್ರವಾದಿಯೊಬ್ಬ ಮಂತ್ರ ಹಾಕುತ್ತಿರುವ ವೀಡಿಯೋವೊಂದು ವೈರಲ್‌ ಆಗಿದ್ದು, ಇದರಿಂದಾಗಿಯೇ ಈ ವಿಚಾರ ಬೆಳಕಿಗೆ ಬಂದಿದೆ. ಈ ವೀಡಿಯೋದಲ್ಲಿ ಆಸ್ಪತ್ರೆಯ ಮಂಚದ ಮೇಲೆ ಹಾವು ಕಡಿತಕ್ಕೊಳಗಾದ ಮಹಿಳೆಯನ್ನು ಮಲಗಿಸಲಾಗಿದ್ದು, ಆಕೆಯ ಅಕ್ಕಪಕ್ಕದಲ್ಲಿರುವ ಮಂತ್ರವಾದಿಯೊಬ್ಬ ಮಂತ್ರ ಹೇಳುತ್ತಾ, ಬಟ್ಟೆಯೊಂದರಿಂದ ಆಕೆಯ ತಲೆಯಿಂದ ಹಿಡಿದು ಕಾಲಿನವರೆಗೂ ಹೊಡೆಯುತ್ತಾ ಬರುತ್ತಾನೆ. 
ಈ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಸ್ಥಳೀ ಯರೇ ಮಂತ್ರವಾದಿಗಳನ್ನು ಕರೆದುಕೊಂಡು ಬರುತ್ತಿರುವುದು ಸಹಜ ಎಂದು ಹೇಳಲಾ ಗುತ್ತಿದೆ. ಆದರೆ, ಇದನ್ನು ತಡೆಯಲು ಆಸ್ಪತ್ರೆ ಆಡಳಿತ ಮಂಡಳಿಯೂ ಹಿಂದೇಟು ಹಾಕುತ್ತಿದೆ.  ಅಧಿಕಾರಿಗಳಿಗೆ ಮಂತ್ರವಾದಿಗಳ ಭಯ ಇರುವುದೇ ಕಾರಣ ಎನ್ನಲಾಗಿದೆ.


Trending videos

Back to Top