ಪತ್ರ ಬರೆದಿದ್ದು ಪ್ರಧಾನಿಗೆ, ತಲುಪಿದ್ದು ನಟನಿಗೆ  | Udayavani - ಉದಯವಾಣಿ
   CONNECT WITH US  
echo "sudina logo";

ಪತ್ರ ಬರೆದಿದ್ದು ಪ್ರಧಾನಿಗೆ, ತಲುಪಿದ್ದು ನಟನಿಗೆ 

ಒಂದೇ ಹೆಸರಿನ ಇಬ್ಬರು ಪ್ರಸಿದ್ಧ ವ್ಯಕ್ತಿಗಳು ಇದ್ದರೆ ಗೊಂದಲ, ಗಲಿಬಿಲಿಗಳು ಸಾಮಾನ್ಯ. ಇಂತಹ ಗೊಂದಲವೊಂದನ್ನು ಬಾಲಿವುಡ್‌ ನಟ ಇಮ್ರಾನ್‌ ಖಾನ್‌ ಇನ್‌ಸ್ಟಾಗ್ರಾಂ ಮೂಲಕ ಬಹಿರಂಗಪಡಿಸಿದ್ದಾರೆ. ವ್ಯಕ್ತಿಯೊಬ್ಬರು ಬರೆದಿರುವ ಪತ್ರವನ್ನು ಅವರು ಪೋಸ್ಟ್‌ ಮಾಡಿದ್ದಾರೆ. ವಿಶೇಷವೇನೆಂದರೆ ಈ ಪತ್ರ ನಿಜವಾಗಿ ತಲುಪಬೇಕಿದ್ದದ್ದು ಪಾಕಿಸ್ತಾನದ ನಿಯೋಜಿತ ಪ್ರಧಾನಿ ಇಮ್ರಾನ್‌ ಖಾನ್‌ಗೆ.

ಇಮ್ರಾನ್‌ ಖಾನ್‌ರ ಅಭಿಮಾನಿಯೊಬ್ಬರು ಅವರ ತಂಡದಲ್ಲಿ ತಮ್ಮನ್ನು ಸೇರಿಸಿಕೊಳ್ಳುವ ನಿವೇದನೆ ಯನ್ನು ಪತ್ರದಲ್ಲಿ ಮಾಡಿದ್ದಾರೆ. ಆದರೆ ಇದು ಬಂದು ತಲುಪಿಸುವುದು ಭಾರತೀಯ ನಟನಿಗೆ. ಈ ಫೋಸ್ಟ್‌ಗೆ ಹಾಸ್ಯಭರಿತ ಒಕ್ಕಣೆ ನೀಡಿರುವ ಅವರು, "ನಾನು ಯಾವುದೇ ಕರ್ತವ್ಯ ಕರೆಯನ್ನೂ ನಿರಾಕರಿಸುವುದಿಲ್ಲ. ಇದಕ್ಕೆ ಸಂಬಂಧಿಸಿದಂತೆ ಒಂದು ಕರಡನ್ನು ಸಿದ್ಧಪಡಿಸುತ್ತೇನೆ,ಅದರ ಕುರಿತು ಮಾಹಿತಿ ಹಂಚಿಕೊಳ್ಳುತ್ತೇನೆ' ಎಂದಿದ್ದಾರೆ.
 

Trending videos

Back to Top