CONNECT WITH US  

ಚಾಲಕನಿಗೆ ತಲೆ ಸುತ್ತು;KSRTC ಉರುಳಿ ಬಿತ್ತು:ತಪ್ಪಿದ ಭಾರೀ ಅನಾಹುತ

ಬಾಗಲಕೋಟೆ: ಚಲಿಸುತ್ತಿರುವಾಗಲೇ ಚಾಲಕನಿಗೆ ತಲೆ ಸುತ್ತು ಬಂದು ಕೆಎಸ್‌ಆರ್‌ಟಿಸಿ ಬಸ್‌ ಪಲ್ಟಿಯಾದ ಘಟನೆ ಮಂಗಳವಾರ ಬಾದಾಮಿಯ ಕುಟಕನಕೇರಿ ಕ್ರಾಸ್‌ನಲ್ಲಿ ನಡೆದಿದೆ. 

ಗೋವಾದಿಂದ ಬಾದಾಮಿಗೆ ಬರುತ್ತಿದ್ದ ಬಸ್‌ ಅವಘಡಕ್ಕೀಡಾಗಿದ್ದು, ಇಬ್ಬರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಷಾತ್‌ ಯಾವುದೇ ಪ್ರಾಣ ಹಾನಿಯಾಗಿಲ್ಲ. 

ಗಾಯಾಳುಗಳಿಬ್ಬರಿಗೆ ಬಾದಾಮಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. 


Trending videos

Back to Top