CONNECT WITH US  

ಮುಂಬಯಿ :"ಕೀಕಿ' ಡ್ಯಾನ್ಸ್‌ ಮಾಡಿದ ಮೂವರಿಗೆ ಕ್ಲೀನಿಂಗ್‌ ಶಿಕ್ಷೆ!

ಮುಂಬೈ: ಚಲಿಸುವ ಕಾರಿನಿಂದ ಕೆಳಗಿಳಿದು ಕೀಕಿ ನೃತ್ಯ ಮಾಡುವ ಅಮಲೇರಿಸಿಕೊಂಡಿದ್ದ ಮಹಾರಾಷ್ಟ್ರದ ಮೂವರು ಯುವಕರಿಗೆ ಪಾಲ್ಗಾರ್‌ ಜಿಲ್ಲೆಯ ನ್ಯಾಯಾಲಯವೊಂದು ಸತತವಾಗಿ ಮೂರು ದಿನಗಳ ಕಾಲ ಬೆ. 11ಗಂಟೆಯಿಂದ ಮಧ್ಯಾಹ್ನ 2ರವರೆಗೆ ವಾಸೈ ರೈಲ್ವೆ ನಿಲ್ದಾಣ ಸ್ವಚ್ಛಗೊಳಿಸುವ ಶಿಕ್ಷೆಯನ್ನು ನೀಡಿದೆ! 

ಶ್ಯಾಂ ಶರ್ಮ (24), ಧ್ರುವ್‌ (23) ಹಾಗೂ ನಿಶಾಂತ್‌ (20) ಎಂಬ ಯುವಕರು ಇತ್ತೀಚೆಗೆ, ವಸೈ ರೈಲು ನಿಲ್ದಾಣದ ಬಳಿ ಕೀಕಿ ನೃತ್ಯ ಚಿತ್ರೀಕರಿಸಿ ಯೂಟ್ಯೂಬ್‌ಗ ಹಾಕಿದ್ದರು. ಇದನ್ನು ಗಮನಿಸಿದ ರೈಲ್ವೆ ಸುರûಾ ದಳದ ಸಿಬ್ಬಂದಿ ಈ ಮೂವರನ್ನೂ ಬಂಧಿಸಿ ರೈಲ್ವೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

Trending videos

Back to Top