CONNECT WITH US  

ದಿಲ್ಲಿ ಎನ್‌ಸಿಆರ್‌: ಪೆಟ್ರೋಲ್‌,ಸಿಎನ್‌ಜಿ ವಾಹನಕ್ಕೆ ಬ್ಲೂ ಸ್ಟಿಕರ್

ಹೊಸದಿಲ್ಲಿ : ಮಾಲಿನ್ಯಕಾರಕ ಇಂಧನವನ್ನು ಬಳಸುವ ಮೋಟಾರು ವಾಹನಗಳನ್ನು ಗುರುತಿಸಲು ಅವುಗಳಿಗೆ ವಿವಿಧ ಬಣ್ಣದ ಸ್ಟಿಕರ್‌ ಅಂಟಿಸುವ ಕೇಂದ್ರ ಸರಕಾರದ ಪ್ರಸ್ತಾವವನ್ನು ಸುಪ್ರೀಂ ಕೋರ್ಟ್‌ ಸಮ್ಮತಿಸಿದೆ. 

ಈ ಪ್ರಸ್ತಾವದ ಪ್ರಕಾರ ದಿಲ್ಲಿ ಎನ್‌ಸಿಆರ್‌ ನಲ್ಲಿ ಎಲ್ಲ ಪೆಟ್ರೋಲ್‌ ಮತ್ತು ಸಿಎನ್‌ಜಿ ಕಾರುಗಳುಗಳಿಗೆ ನೀಲಿ ಸ್ಟಿಕರ್‌ ಮತ್ತು ಡೀಸೆಲ್‌ ವಾಹನಗಳಿಗೆ ಕಿತ್ತಳೆ ಬಣ್ಣದ ಸ್ಟಿಕರ್‌ ಹಚ್ಚಲಾಗುವುದು.

ಕಲರ್‌ ಕೋಡೆಡ್‌ ಸ್ಟಿಕರ್‌ ಊಲಕ ಮಾಲಿನ್ಯಕಾರಕ ವಾಹನಗಳನ್ನು ಗುರುತಿಸಲು ಸಾಧ್ಯವಾಗಿ ವಾಯು ಮಾಲಿನ್ಯ ನಿಯಂತ್ರಿಸುವುದು ಸುಲಭವಾಗುವುದು ಎಂದು ಪರಿಸರ ಮಾಲಿನ್ಯ ನಿಯಂತ್ರಣ ಪ್ರಾಧಿಕಾರ ಈ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟಿಗೆ ತಿಳಿಸಿತ್ತು. 


Trending videos

Back to Top