ರಫೇಲ್: ಮೋದಿ ವಿರುದ್ಧ ಕಾಂಗ್ರೆಸ್ ಹೊಸ ದಾಳಿ, ಟೀಸರ್ ಬಿಡುಗಡೆ
Team Udayavani, Aug 14, 2018, 12:08 PM IST
ಹೊಸದಿಲ್ಲಿ : ರಫೇಲ್ ಫೈಟರ್ ಜೆಟ್ ಖರೀದಿ ವಹಿವಾಟಿನಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರಧಾನಿ ಮೋದಿ ಸರಕಾರದ ವಿರುದ್ಧ ವಾಕ್ ದಾಳಿ ನಡೆಸುತ್ತಲೇ ಇರುವ ಕಾ,ಗ್ರೆಸ್ ಪಕ್ಷ ಇದೀಗ ಈ ವಿಷಯದಲ್ಲಿ ಮೋದಿ ಸರಕಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸುವ ನಿಟ್ಟಿನಲ್ಲಿ ಸಣ್ಣದೊಂದು ಟೀಸರ್ ವಿಡಿಯೋ ಬಿಡುಗಡೆ ಮಾಡಿದೆ.
ಈ ಟೀಸರ್ ವಿಡಿಯೋದಲ್ಲಿ ಕಾಂಗ್ರೆಸ್ ಪಕ್ಷ ತಾನು ಸದ್ಯದಲ್ಲೇ ತಾನು “ಮೋದಿ ಸರಕಾರದ ಈ ಅವ್ಯವಹಾರದ ಮೇಲೆ ಇನ್ನಷ್ಟು ಬೆಳಕು ಚೆಲ್ಲುವುದಾಗಿ’ ಹೇಳಿಕೊಂಡಿದೆ.
ಟ್ವಿಟರ್ನಲ್ಲಿ ಈ ಟೀಸರ್ ವಿಡಿಯೋ ಹಾಕಿರುವ ಕಾಂಗ್ರೆಸ್, ತನ್ನ ಫಾಲೋವರ್ಗಳಿಗೆ “ನೋಡುತ್ತಾ ಇರಿ, ಈ ವಿಷಯದಲ್ಲಿ ಇನ್ನಷ್ಟು ವಿಷಯಗಳು ಹೊರ ಬರಲಿವೆ’ ಎಂದು ಹೇಳಿದೆ.
ತನ್ನ ನೇತೃತ್ವದ ಯುಪಿಎ ಸರಕಾರ ನಿಗದಿಸಿದ್ದ ದರಕ್ಕಿಂತಲೂ ಹೆಚ್ಚು ಬೆಲೆ ತೆತ್ತು ಮೋದಿ ನೇತೃತ್ವದ ಎನ್ಡಿಎ ಸರಕಾರ ಅದೇ ರಫೇಲ್ ಫೈಟರ್ ಜೆಟ್ಗಳನ್ನು ಖರೀದಿಸುವ ಮೂಲಕ ಭ್ರಷ್ಟಾಚಾರ ಎಸಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.
ಫ್ರಾನ್ಸ್ ಜತೆಗೆ ದುಬಾರಿ ರಫೇಲ್ ಫೈಟರ್ ಜೆಟ್ ಖರೀದಿ ವ್ಯವಹಾರ ಕುದುರಿಸಿರುವ ಮೋದಿ ಸರಕಾರ ಆ ಮೂಲಕ ಸ್ವಜನ ಪಕ್ಷಪಾತದ ಬಂಡವಾಳಶಾಹಿತ್ವವನ್ನು, ಸ್ವಹಿತಾಸಕ್ತಿಯನ್ನು ಪ್ರೋತ್ಸಾಹಿಸುತ್ತಿದ್ದು ರಾಷ್ಟ್ರೀಯ ಹಿತಾಸಕ್ತಿಗಳನ್ನು ಬಲಿಕೊಡುತ್ತಿದೆ ಎಂದು ಆರೋಪಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು
Congress ಪಡೆದ ಬಾಂಡ್ ಸುಲಿಗೆ ಅಲ್ಲವೇ: ಅಮಿತ್ ಶಾ ಪ್ರಶ್ನೆ
250 km per hour; ಶೀಘ್ರದಲ್ಲೇ ಬುಲೆಟ್ ರೈಲಿನಲ್ಲೂ ಆತ್ಮನಿರ್ಭರತೆ!
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?