CONNECT WITH US  

ಜಲಪಾತದಲ್ಲಿ ಮುಳುಗಿ 12 ಸಾವು

ಭೋಪಾಲ: ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯಲ್ಲಿರುವ ಜಲಪಾತದಲ್ಲಿ ಹಠಾತ್‌ ನೀರಿನ ಹರಿವು ಹೆಚ್ಚಾದ್ದರಿಂದಾಗಿ, 12 ಪ್ರವಾಸಿಗರು ಸಾವನ್ನಪ್ಪಿದ್ದಾರೆ. 30-40 ಜನರು ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ ಎನ್ನಲಾಗಿದೆ. 

ಕುಟುಂಬದ ಸದಸ್ಯರು ಸ್ನಾನ ಮಾಡುತ್ತಿರುವಾಗ ನೀರಿನ ಪ್ರಮಾಣ ಹಠಾತ್ತನೆ ಹೆಚ್ಚಿದ್ದರಿಂದ ಏಳು ಜನರರಿರುವ ಇಡೀ ಕುಟುಂಬ ಕೊಚ್ಚಿಹೋಗಿದೆ. ಮಳೆ ಪ್ರವಾಹದ ಮೇಲ್ಭಾಗದಲ್ಲಿ ವಿಪರೀತ ಮಳೆ ಸುರಿದಿರುವುದು ಹಾಗೂ ಆಣೆಕಟ್ಟೆಯಿಂದ ನೀರು ಹೊರಬಿಟ್ಟಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಇನ್ನೂ ಹಲವರು ನೀರಿನ ಮಧ್ಯೆ ಸಿಲುಕಿಕೊಂಡಿದ್ದಾರೆ ಎನ್ನಲಾಗಿದ್ದು, ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ರಕ್ಷಣಾ ಕಾರ್ಯಾಚರಣೆಗೆ ಪೊಲೀಸರು ಧಾವಿಸಿದ್ದು, ವಾಯುಪಡೆಯ ನೆರವನ್ನೂ ಕೇಳಲಾಗಿದೆ.


Trending videos

Back to Top