ಮಧ್ಯಪ್ರದೇಶ: 4 ರ ಬಾಲೆಯ ಮೇಲೆ ಅತ್ಯಾಚಾರ ಎಸಗಿದ 14 ರ ಬಾಲಕ
Team Udayavani, Aug 17, 2018, 5:10 PM IST
ಉಜ್ಜಯಿನಿ: 14 ವರ್ಷದ ಬಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಕಳವಳಕಾರಿ ಘಟನೆ ಜಲ್ವಾ ಎಂಬಲ್ಲಿ ನಡೆದಿದೆ.
ಸಂಜೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗು ಮಾತ್ರ ಟಿವಿ ನೋಡುತ್ತಿತ್ತು. ಈ ವೇಳೆಗೆ ಮನೆಗೆ ನುಗ್ಗಿದ ಬಾಲಕ ಹೇಯ ಕೃತ್ಯ ಎಸಗಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಮನೆಗೆ ಬಂದ ಪೋಷಕರ ಬಳಿ ಬಾಲಕಿ ವಿಷಯ ಹೇಳಿಕೊಂಡಿದ್ದು ಕೂಡಲೆ ಗಟ್ಟಿಯಾ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಪೊಲೀಸರು ಪೋಸ್ಕೋ ಕಾಯಿದೆ ಅಡಿ ಪ್ರಕರಣ ದಾಖಲಿಸಿಕೊಂಡು , ಆರೋಪಿ ಬಾಲಕನಿಗಾಗಿ ಶೋಧ ನಡೆಸುತ್ತಿದ್ದಾರೆ.