CONNECT WITH US  

ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ವಾಜಪೇಯಿ ನಿಧನ ವಾರ್ತೆ

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಅಗಲಿಕೆಯ ಸುದ್ದಿ ಜಗತ್ತಿನಾದ್ಯಂತದ ವಿವಿಧ ಮಾಧ್ಯಮಗಳಲ್ಲಿ ಪ್ರಕಟಗೊಂಡಿದ್ದು, ಆ ಕುರಿತು ಮಾಹಿತಿ ಇಲ್ಲಿದೆ.

ಬಿಬಿಸಿ
ಅಂತಾರಾಷ್ಟ್ರೀಯ ಸುದ್ದಿ ವಾಹಿನಿ ಬಿಬಿಸಿ ವಾಜಪೇಯಿ ಅವರದ್ದು ಸವಾಲಿನ ವ್ಯಕ್ತಿತ್ವ ಎಂದು ಬಿಂಬಿಸಿದೆ. ಮೂರು ಬಾರಿ ಭಾರತದ ಪ್ರಧಾನಿಯಾಗಿದ್ದ ಅವರು ಅತ್ಯಂತ ಬಡ ಕುಟುಂಬದಿಂದ ಬಂದವರು ಎಂದು ಪ್ರಸ್ತಾಪಿಸಿತ್ತು.

ದ ಗಾರ್ಡಿಯನ್‌
ಪೋಖ್ರಾನ್‌ ಪರಮಾಣು ಪರೀಕ್ಷೆ ನಡೆಸುವ ಮೂಲಕ ಪಾಕಿಸ್ತಾನಕ್ಕೆ ಹೆದರಿಕೆ ಹುಟ್ಟಿಸಿದ್ದರು. ಬಳಿಕ ಕೆಲವೇ ವರ್ಷಗಳಲ್ಲಿ ಅವರೇ ಶಾಂತಿ ಪುನಃಸ್ಥಾಪಿಸುವ ನಿಟ್ಟಿಲ್ಲಿ ಕ್ರಮಕ್ಕೆ ಮುಂದಾಗಿದ್ದರು. ವಾಜಪೇಯಿ ಅವರನ್ನು ಹಿಂದೂ ರಾಷ್ಟ್ರೀಯವಾದದ ಸೌಮ್ಯವಾದಿ ನಾಯಕ ಎಂದು ಬರೆದುಕೊಂಡಿದೆ.

ದ ನ್ಯೂಯಾರ್ಕ್‌ ಟೈಮ್ಸ್‌
ಪೋಖ್ರಾನ್‌ನಲ್ಲಿ ಪರಮಾಣು ಪರೀಕ್ಷೆ ನಡೆಸಿ ಪ್ರಪಂಚವನ್ನೇ ದಂಗುಬಡಿಸಿದ ನಾಯಕ ಎಂದು ಪತ್ರಿಕೆ ಬಣ್ಣಿಸಿದೆ. ಇದರ ಜತೆಗೆ ಪಾಕಿಸ್ತಾನದೊಂದಿಗೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಂಡಿದ್ದರು. ವಿಶ್ವದ ಅತ್ಯಂತ ದೊಡ್ಡ ಪ್ರಜಾಸತ್ತಾತ್ಮಕ ರಾಷ್ಟ್ರವಾಗಿರುವ ಭಾರತಕ್ಕೆ ಅವರು ಹಿರಿಯನಿದ್ದಂತೆ ಎಂದಿದೆ.

ದ ವಾಷಿಂಗ್ಟನ್‌ ಪೋಸ್ಟ್‌
"ಭಾರತವನ್ನು ಪರಮಾಣು ಶಕ್ತಿಯತ್ತ ಕೊಂಡೊಯ್ದ ಅಟಲ್‌ ಬಿಹಾರಿ ವಾಜಪೇಯಿ ನಿಧನ' ಎಂಬ ಶಿರೋನಾಮೆ ಯಲ್ಲಿ ಸುದ್ದಿ ಪ್ರಕಟಿಸಿದೆ. ವಾಜಪೇಯಿ ಅವರ ವೈಯಕ್ತಿಕ ವರ್ಚಸ್ಸಿನಿಂದಲೇ ಬಿಜೆಪಿ ಅಧಿಕಾರ ಪ್ರಾಪ್ತಿಯಾಯಿತು ಎಂದು ಬರೆದುಕೊಂಡಿದೆ.

ಡಾನ್‌ ನ್ಯೂಸ್‌
ಪಾಕಿಸ್ತಾನದ ಜತೆಗೆ ಶಾಂತಿ ಸ್ಥಾಪಿಸುವ ನಿಟ್ಟಿನಲ್ಲಿ ಅಭೂತಪೂರ್ವ ಕ್ರಮವನ್ನು ವಾಜಪೇಯಿ ಕೈಗೊಂಡಿದ್ದರು ಎಂದು ಶ್ಲಾ ಸಿದೆ. ಪೋಖ್ರಾನ್‌ ಪರಮಾಣು ಪರೀಕ್ಷೆ ನಡೆಸಿದ್ದರಿಂದ ಪಾಕಿಸ್ತಾನದ ಜತೆಗೆ ಅಣು ಯುದ್ಧಕ್ಕೆ ದಾರಿ ಮಾಡಿಕೊಡುವ ಸಾಧ್ಯತೆ ಇತ್ತು ಎಂದು ಬರೆದುಕೊಂಡಿದೆ.


Trending videos

Back to Top