CONNECT WITH US  

ಪೆಟ್ರೋಲ್‌, ಡೀಸೆಲ್‌ ದರ ಏರಿಕೆ

ಹೊಸದಿಲ್ಲಿ: ತೈಲ ಮಾರಾಟ ಸಂಸ್ಥೆಗಳು (ಒಎಂಸಿ) ಗುರುವಾರ ಮಧ್ಯ ರಾತ್ರಿಯಿಂದಲೇ ಜಾರಿಗೆ ಬರುವಂತೆ ತೈಲ ಬೆಲೆಯನ್ನು ಏರಿಸಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲ ದರ ಏರಿಕೆಯಾಗಿದ್ದರಿಂದಾಗಿ ಈ ದರಗಳಲ್ಲಿ ಹೆಚ್ಚಳವಾಗಿದೆ.

ಪರಿಷ್ಕೃತ ದರ ಪಟ್ಟಿಯಂತೆ ದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 77.20 ರೂ. ಆಗಿದ್ದರೆ, ಮುಂಬಯಿಯಲ್ಲಿ 84.63 ರೂ., ಕೋಲ್ಕತಾದಲ್ಲಿ 80.14 ರೂ. ಮತ್ತು ಚೆನ್ನೈಯಲ್ಲಿ 80.19 ರೂ. ಆಗಿದೆ. ಪರಿಷ್ಕೃತ ಡೀಸೆಲ್‌ ದರ ದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 68.78 ರೂ. ಇದ್ದರೆ, ಮುಂಬಯಿಯಲ್ಲಿ 73.02 ರೂ., ಕೋಲ್ಕತಾದಲ್ಲಿ 71.62 ರೂ. ಹಾಗೂ ಚೆನ್ನೈಯಲ್ಲಿ 72.65 ರೂ. ಆಗಿದೆ. ಡೀಸೆಲ್‌ ಮೇಲೆ ದಿಲ್ಲಿಯಲ್ಲಿ ವಿಧಿಸಲಾಗುವ ವ್ಯಾಟ್‌ ತೆರಿಗೆ ದೇಶ ದಲ್ಲೇ ಅತಿ ಕಡಿಮೆ ಎಂದು ಹೇಳಲಾಗಿದ್ದು, ಅಲ್ಲಿ 17.24 ರೂ. ವ್ಯಾಟ್‌ ತೆರಿಗೆಯಿದೆ.


Trending videos

Back to Top