ಇನ್ಫಿ ಸಿಎಫ್ಒ ರಂಗನಾಥ್ ರಾಜೀನಾಮೆ
Team Udayavani, Aug 19, 2018, 6:00 AM IST
ಮುಂಬಯಿ: ಜಾಗತಿಕ ಸಾಫ್ಟ್ವೇರ್ ದೈತ್ಯ ಸಂಸ್ಥೆ ಇನ್ಫೋಸಿಸ್ನ ಮುಖ್ಯ ಹಣಕಾಸು ಅಧಿಕಾರಿ(ಸಿಎಫ್ಒ) ಎಂಡಿ ರಂಗನಾಥ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಇನ್ಫೋಸಿಸ್ ಆಂಗೀಕರಿಸಿದೆ. ಇದೇ ನ.16ರ ವರೆಗೆ ಅವರು ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಇನ್ಫೋಸಿಸ್ ಹೇಳಿದೆ. ಜತೆಗೆ ತೆರವಾಗುವ ಸ್ಥಾನಕ್ಕೆ ನೂತನ ಅಧಿಕಾರಿ ನೇಮಿಸುವ ತಯಾರಿ ನಡೆಸಲಾಗುತ್ತಿದೆ ಎಂದೂ ತಿಳಿಸಿದೆ. ರಂಗನಾಥ್ 18 ವರ್ಷಗಳ ಕಾಲ ಇನ್ಫೋಸಿಸ್ನಲ್ಲಿ ಉದ್ಯೋಗಿಯಾಗಿದ್ದರು. 2015ರಲ್ಲಿ ಸಿಎಫ್ಒ ಸ್ಥಾನಕ್ಕೇರಿದ್ದರು. ಸಂಸ್ಥೆಯ ಮಾಜಿ ಸಿಇಒ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ 7 ತಿಂಗಳುಗಳಲ್ಲಿಯೇ ರಂಗನಾಥ್ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಕಾರಣ ತಿಳಿದಿಲ್ಲ.