CONNECT WITH US  

ದಾಭೋಲ್ಕರ್‌, ಗೌರಿ  ಹತ್ಯೆಗಳಲ್ಲಿ ಸಾಮ್ಯತೆ: ಸಿಬಿಐ

ಪುಣೆ : ಪುಣೆಯ ವಿಚಾರವಾದಿ ನರೇಂದ್ರ ದಾಭೋಲ್ಕರ್‌ ಹತ್ಯೆ ಹಾಗೂ ಕರ್ನಾಟಕದ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆಯ ಶೈಲಿಗಳು ಪರಸ್ಪರ ಹೋಲುತ್ತವೆ ಎಂದು ಸಿಬಿಐ, ಪುಣೆಯ ಸ್ಥಳೀಯ ನ್ಯಾಯಾಲಯವೊಂದಕ್ಕೆ ತಿಳಿಸಿದೆ. ಈ ಮೂಲಕ ಈ ಎರಡೂ ಪ್ರಕರಣಗಳಲ್ಲಿ ಒಂದೇ ಗುಂಪಿನ ಕೈವಾಡವಿದೆ ಎಂಬುದನ್ನು ಸಿಬಿಐ, ನ್ಯಾಯಾಲಯಕ್ಕೆ ಮನವರಿಕೆ ಮಾಡಿ ಕೊಡಲೆತ್ನಿಸಿದೆ. ಇದಲ್ಲದೆ, ಗೌರಿ ಅವರನ್ನು ಕೊಂದ ಆರೋಪ ಎದುರಿಸುತ್ತಿರುವವರಲ್ಲಿ ಒಬ್ಟಾತ, ಸಚಿನ್‌ಗೆ ಪಿಸ್ತೂಲು, ಮೂರು ಗುಂಡುಗಳು ಹಾಗೂ ನಿಯತಕಾಲಿಕೆಯೊಂದನ್ನು ನೀಡಿರುವುದಾಗಿ ತಿಳಿಸಿ ದ್ದಾನೆಂದು ಸಿಬಿಐ, ನ್ಯಾಯಾಲಯಕ್ಕೆ ಹೇಳಿದೆ.

Trending videos

Back to Top