CONNECT WITH US  

ಕೇಂದ್ರದ ಪರ ಬ್ಯಾಟಿಂಗ್‌ ಮಾಡಿದ ಶಕ್ತಿ ಸಿನ್ಹಾ

ಹೊಸದಿಲ್ಲಿ: ದಿಲ್ಲಿಯಲ್ಲಿ ನೆಹರು ಮ್ಯೂಸಿಯಂ ಸ್ಥಳದಲ್ಲಿ ದೇಶದ ಎಲ್ಲ ಪ್ರಧಾನಿಗಳ ಮ್ಯೂಸಿಯಂ ನಿರ್ಮಿಸುವ ಪ್ರಸ್ತಾವಕ್ಕೆ ಕಾಂಗ್ರೆಸ್‌ ಹಾಗೂ ವಿಪಕ್ಷಗಳ ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿರುವ ಮಧ್ಯೆಯೇ, ಎನ್‌ಎಂಎಂಎಲ್‌ ನಿರ್ದೇಶಕ ಶಕ್ತಿ ಸಿನ್ಹಾ ಕೇಂದ್ರದ ನಿರ್ಧಾರ ಸರಿ ಎಂದಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಆಕ್ಷೇಪದಲ್ಲಿ ಹುರುಳಿಲ್ಲ. ಈ ಹಿಂದೆ ಮ್ಯೂಸಿಯಂಗಾಗಿ ಮೀಸಲಿಟ್ಟ ಜಾಗದ ಒಂದು ಭಾಗವನ್ನು ದೆಹಲಿ ಪೊಲೀಸ್‌ ಠಾಣೆ, ನೆಹರೂಗೆ ಸಂಬಂಧವಿಲ್ಲದ ತಾರಾಲಯವನ್ನು ಸ್ಥಾಪಿಸಿದಾಗ ನೆಹರುಗೆ ಅವಮಾನ ಮಾಡಿದಂತಾಗಿಲ್ಲವೇ ಎಂದು ಪ್ರಶ್ನಿಸಿದ್ದಾರೆ. ಎಲ್ಲ ಪ್ರಧಾನಿಗಳ ಮ್ಯೂಸಿಯಂ ಸ್ಥಾಪಿಸುವುದರಿಂದ ನೆಹರು ಸ್ಮಾರಕದ ಗೌರವ ಇನ್ನೂ ಹೆಚ್ಚುತ್ತದೆ ಎಂದು ಸಿನ್ಹಾ ಹೇಳಿದ್ದಾರೆ.


Trending videos

Back to Top