CONNECT WITH US  

ನೀವು ರಾಹುಲ್ ಗಾಂಧಿಯೋ ಅಥವಾ ಚೀನಾ ಗಾಂಧಿಯೋ? ಸಂಬಿತ್ ಪಾತ್ರ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಒಬ್ಬ ಚೀನಾದ ವಕ್ತಾರ ಎಂದು ಗಂಭೀರವಾಗಿ ಆರೋಪಿಸಿರುವ ಬಿಜೆಪಿ ವಕ್ತಾರ ಸಂಬಿತ್ ಪಾತ್ರ, ವಿರೋಧ ಪಕ್ಷದ ಈ ಮುಖಂಡ ಯಾವಾಗಲೂ ನೆರೆ ದೇಶದ ಪರವಾಗಿಯೇ ಮಾತನಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ನೀವು ರಾಹುಲ್ ಗಾಂಧಿಯೋ ಅಥವಾ ಚೀನಾ ಗಾಂಧಿಯೇ. ನೀವು ಯಾವಾಗಲೂ ನೆರೆಯ ದೇಶದ ಪರವಾಗಿಯೇ ಮಾತನಾಡುತ್ತೀರಲ್ಲ ಏನೀದರ ಮರ್ಮ ಎಂದು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುತ್ತಾರೆ ಎಂಬ ಸುದ್ದಿಯ ಬೆನ್ನಲ್ಲೇ ಪಾತ್ರ ಈ ಆರೋಪ ಮಾಡಿದ್ದು, ಮೂಲಗಳ ಪ್ರಕಾರ ಗಾಂಧಿ ನೇಪಾಳದಿಂದ ಚೀನಾ ಮೂಲಕ ಕೈಲಾಸ ಪರ್ವತದತ್ತ ತೆರಳಲಿದ್ದಾರೆ ಎಂದು ತಿಳಿಸಿದೆ ಎಂದು ಹೇಳಿದರು.

ಭಾರತದ ವಕ್ತಾರರಾಗುವ ಬದಲು ರಾಹುಲ್ ಗಾಂಧಿ ಯಾಕೆ ಚೀನಾದ ವಕ್ತಾರರಂತೆ ಮಾತನಾಡುತ್ತಾರೆ ಎಂದು ಪ್ರಶ್ನಿಸಿ, ಯುಕೆ ಸಂಸತ್ ನಲ್ಲಿ ರಾಹುಲ್ ಗಾಂಧಿ ಮಾತನಾಡಿರುವ ವಿಡಿಯೋವನ್ನು ಪತ್ರಕರ್ತರಿಗೆ ಪ್ರದರ್ಶಿಸಿದ್ದರು. ಪ್ರತಿಯೊಂದು ವಿಷಯವನ್ನು ಚೀನಾದ ದೃಷ್ಟಿಕೋನದಲ್ಲಿಯೇ ಅಳೆಯುತ್ತಾರೆ ವಿನಃ ಭಾರತದ ದೃಷ್ಟಿಕೋನ ಅವರಿಗೆ ಬೇಕಾಗಿಲ್ಲ. ಈ ನಿಟ್ಟಿನಲ್ಲಿ ನಾನು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತಿದ್ದೇನೆ, ರಾಹುಲ್ ಗಾಂಧಿ ಚೀನಾದಲ್ಲಿ ಯಾವ ರಾಜಕಾರಣಿಯನ್ನು ಭೇಟಿಯಾಗುತ್ತಾರೆ ಎಂದು ಹೇಳಿದರು.

Trending videos

Back to Top