CONNECT WITH US  

ಪ್ರಿಯಾ ಮೇಲಿನ ಕೇಸ್ ವಜಾ, ದೂರುದಾರರಿಗೆ ಬೇರೆ ಕೆಲಸ ಇಲ್ವಾ: ಸುಪ್ರೀಂ

ನವದೆಹಲಿ: ಒರು ಅಡಾರ್ ಲವ್ ಮಲಯಾಳಂ ಚಿತ್ರದ ಒಂದೇ ಒಂದು ದೃಶ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ಜನಪ್ರಿಯಗೊಂಡಿದ್ದ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ವಿರುದ್ಧ ದಾಖಲಾಗಿದ್ದ ಎಫ್ ಐಆರ್ ಅನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿದೆ.

ಒರು ಅಡಾರ್ ಲವ್ ಚಿತ್ರದಲ್ಲಿನ ಹಾಡಿನಲ್ಲಿ ಕಣ್ ಹೊಡೆಯುವ ದೃಶ್ಯದ ಮೂಲಕ ಪ್ರಿಯಾ ಜಾಗತಿಕವಾಗಿ ಜನಪ್ರಿಯಗೊಂಡಿದ್ದಳು. ಆದರೆ ನಟಿ ಮತ್ತು ಸಿನಿಮಾ ನಿರ್ಮಾಪಕರ ವಿರುದ್ಧ ಹಾಡಿನಲ್ಲಿ ಕಣ್ಣು ಹೊಡೆಯುವ ದೃಶ್ಯ ಬಳಸಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದಾಗಿ ಹೈದರಾಬಾದ್ ಮೂಲದ ಸಂಘಟನೆ ದೂರು ದಾಖಲಿಸಿತ್ತು.

ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ, ಸಿನಿಮಾದಲ್ಲಿ ಯಾರೊ ಸಂಗೀತ ಹಾಡುತ್ತಾರೆ, ಆದರೆ ನಿಮಗೆ ಬೇರೆ ಕೆಲಸ ಇಲ್ಲದೆ ದೂರು ದಾಖಲಿಸಿದ್ದೀರಾ ಎಂದು ಪ್ರಶ್ನಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.

Trending videos

Back to Top