CONNECT WITH US  

ಆರ್‌ಟಿಐಗೂ ಜಿಎಸ್‌ಟಿ ಕೇಳಿದ ಮಧ್ಯಪ್ರದೇಶ ಸರ್ಕಾರಕ್ಕೆ ಸರ್ಕಾರ

ಭೋಪಾಲ್‌: ಮಧ್ಯಪ್ರದೇಶ ಸರ್ಕಾರಕ್ಕೆ  ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿ ಕೇಳಿದ ಮಾಹಿತಿಗೂ ಸರಕು ಮತ್ತು ಸೇವಾ ತೆರಿಗೆ ಪಾವತಿಸುವಂತೆ ಆರ್‌ಟಿಐ ಅರ್ಜಿದಾರರಿಗೆ ಸೂಚಿಸಲಾಗಿದೆ. 

ರಿಯಲ್‌ ಎಸ್ಟೇಟ್‌ ನಿಯಂತ್ರಣಾ ಪ್ರಾಧಿಕಾರ ಕಚೇರಿ ನವೀಕರಣಕ್ಕೆ ಎಷ್ಟು ವೆಚ್ಚ ಮಾಡಲಾಗಿದೆ ಎಂದು ವಿವರ ಕೇಳಿ ಆರ್‌ಟಿಐ ಕಾರ್ಯಕರ್ತ ದುಬೆ ಅರ್ಜಿ ಸಲ್ಲಿಸಿದ್ದರು. ಅಚ್ಚರಿಯ ಸಂಗತಿಯೆಂದರೆ ಗೃಹ ಮತ್ತು ಮೂಲಸೌಕರ್ಯ ಅಭಿವೃದ್ಧಿ ಮಂಡಳಿಯು ಶೇ. 9ರ ದರದಲ್ಲಿ ಜಿಎಸ್‌ಟಿ ಪಾವತಿ ಮಾಡುವಂತೆ ಸೂಚಿಸಿದೆ. ಈಗಾಗಲೇ ಆರ್‌ಟಿಐ ಅಡಿ ಸಲ್ಲಿಸಿದ ಅರ್ಜಿಗೆ ಜಿಎಸ್‌ಟಿ ವಿನಾಯಿತಿ ನೀಡಲಾಗಿದ್ದರೂ, ಮಂಡಳಿ ಈ ಆಗ್ರಹ ಮಾಡಿರುವುದು ಅಕ್ರಮ ಎಂದು ದುಬೆ ಹೇಳಿದ್ದಾರೆ.

Trending videos

Back to Top