CONNECT WITH US  

ವಧು ನಾಪತ್ತೆಯಾಗಿದ್ದಕ್ಕೆ ಶಾಸಕನ ಮದುವೆ ಕ್ಯಾನ್ಸಲ್‌

ಈರೋಡ್‌: ಶಾಸಕನೊಬ್ಬ ವರಿಸಬೇಕಿದ್ದ ಹುಡುಗಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪಳನಿಸ್ವಾಮಿ ಸೇರಿದಂತೆ ದಿಗ್ಗಜರೇ ಪಾಲ್ಗೊಳ್ಳಬೇಕಿದ್ದ ಮದುವೆಯೊಂದು ಮುರಿದುಬಿದ್ದಿರುವ ಘಟನೆ ಈರೋಡ್‌ನಲ್ಲಿ ನಡೆದಿದೆ. ಭವಾನಿ ಸಾಗರ್‌ ಕ್ಷೇತ್ರದ ಶಾಸಕ ಎಸ್‌. ಈಶ್ವರನ್‌ (43) ಹಾಗೂ ಆರ್‌. ಸಂಧ್ಯಾ (23) ಅವರ ವಿವಾಹ ಗೋಬಿ ಚೆಟ್ಟಿ ಪಾಳ್ಯಂನ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿತ್ತು. ಆದರೆ, ಶನಿವಾರ  ಸತ್ಯ ಮಂಗಲಂನಲ್ಲಿರುವ ಅಕ್ಕನ ಮನೆಗೆ ಹೋಗಿ ಬರುವುದಾಗಿ ತನ್ನ ತಾಯಿ ತಂಗಮಣಿಗೆ ತಿಳಿಸಿ ಹೊರಟ ಸಂಧ್ಯಾ, ನಾಪತ್ತೆಯಾಗಿದ್ದಾರೆ. 

ಈ ಬಗ್ಗೆ ಪೊಲೀಸರಿಗೆ ದೂರು ನೀಡಿರುವ ತಂಗಮಣಿ, ಪುತ್ರಿ ತಿರುಪೂರ್‌ ಜಿಲ್ಲೆಯ ಕೊಳಾತು ಪಾಳ್ಯಂನ ನಿವಾಸಿ ವಿಘ್ನೇಶ್‌ ಎಂಬ ಯುವಕನನ್ನು ಸಂಧ್ಯಾ ಪ್ರೇಮಿಸುತ್ತಿದ್ದಳು. ಯುವಕನನ್ನು ಪ್ರೇಮಿಸುತ್ತಿದ್ದುದೇ ಕಾರಣ ಎಂದು ದೂರಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಂಧ್ಯಾ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆಂದು "ದ ಟೈಮ್ಸ್‌ ಆಫ್ ಇಂಡಿಯಾ'ವರದಿ ಮಾಡಿದೆ.

Trending videos

Back to Top