ನಿಲ್ಲದ ಪೆಟ್ರೋಲ್ ದರ ಹೆಚ್ಚಳ
Team Udayavani, Sep 4, 2018, 6:00 AM IST
ಹೊಸದಿಲ್ಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನಿತ್ಯವೂ ಏರುತ್ತಿದ್ದು, ಬೆಂಗಳೂರಿನಲ್ಲಿ ಈಗಾಗಲೇ 81 ರೂ. ದಾಟಿ ಸಾಗಿದೆ. ಸೋಮವಾರ ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 33 ಪೈಸೆ ಏರಿಕೆಯಾಗಿ 81.71 ರೂ. ಆಗಿದೆ. ಡೀಸೆಲ್ ಬೆಲೆ ಕೂಡ 41 ಪೈಸೆ ಏರಿದ್ದು, 73.44 ರೂ. ಆಗಿದೆ. ನಿರಂತರವಾಗಿ ರೂಪಾಯಿ ಕುಸಿತ ಹಾಗೂ ವಿಶ್ವ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಈ ಪರಿಸ್ಥಿತಿ ಉಂಟಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಮುಂಬೈನಲ್ಲಿ ದೇಶದಲ್ಲೇ ಅತ್ಯಧಿಕ ಅಂದರೆ ಲೀಟರ್ ಪೆಟ್ರೋಲ್ ಬೆಲೆ 86.24 ರೂ. ಆಗಿದೆ. ಕಳೆದ ಆಗಸ್ಟ್ 16 ರಿಂದ ನಿತ್ಯವೂ ಬೆಲೆ ಏರಿಕೆಯಾಗುತ್ತಿದ್ದು, ಅಂದಿನಿಂದ ಪೆಟ್ರೋಲ್ ಬೆಲೆ 2 ರೂ. ಹೆಚ್ಚಳವಾಗಿದೆ. ಡೀಸೆಲ್ ಬೆಲೆಯು ಈ ಅವಧಿಯಲ್ಲಿ 2.42 ರೂ. ಆಗಿದೆ.