ರಫೇಲ್ ಭ್ರಷ್ಟಾಚಾರದ ಮಹಾಮಾತೆ, ಸಚಿವೆ ನಿರ್ಮಲಾ ಬಲಿಪಶು: ಕಾಂಗ್ರೆಸ್

ಕೋಟ, ರಾಜಸ್ಥಾನ : ರಫೇಲ್ ಫೈಟರ್ ಜೆಟ್ ವ್ಯವಹಾರವನ್ನು ಸರ್ವ ಭ್ರಷ್ಟಾಚಾರಗಳ ಮಹಾಮಾತೆ ಎಂದು ಕರೆದಿರುವ ಕಾಂಗ್ರೆಸ್ ವಕ್ತಾರ ಶಕ್ತಿ ಸಿಂಗ್ ಗೋಹಿಲ್ ಅವರು ಔದ್ಯಮಿಕ ಬಂಡವಾಳಶಾಹಿತ್ವದ ಸಂಸ್ಕೃತಿಯು ನರೇಂದ್ರ ಮೋದಿ ಸರಕಾರದ ಡಿಎನ್‌ಎ ಭಾಗವಾಗಿದೆ ಎಂದು ಹೇಳಿದ್ದಾರೆ.
ಒಂದು ದಿನದ ಭೇಟಿಯಲ್ಲಿ ಇಲ್ಲಿಗೆ ಆಗಮಿಸಿ ಮಾತನಾಡಿದ ಗೋಹಿಲ್, ರಫೇಲ್ ಡೀಲ್ ನಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಲಿಪಶುವಾಗಿದ್ದಾರೆ; ಕಾಂಗ್ರೆಸ್ ಕಾರ್ಯಕರ್ತರು ದೇಶಾದ್ಯಂತ ಪ್ರವಾಸ ಮಾಡಿ ರಫೇಲ್ ಭ್ರಷ್ಟಾಚಾರವನ್ನು ಅನಾವರಣ ಮಾಡಲಿದ್ದಾರೆ ಎಂದು ಹೇಳಿದರು.
ಹಿಂದಿನ ಯುಪಿಎ ಸರಕಾರದಲ್ಲಿ 526 ಕೋಟಿ ರೂ. ಗೆ ಅಂತಿಮಗೊಂಡಿದ್ದ ರಫೇಲ್ ಖರೀದಿ ವ್ಯವಹಾರವು ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದಡಿ ಶೇ.300ರಷ್ಟು ಹೆಚ್ಚಿನ ಮೊತ್ತವಾಗಿ 1,670 ಕೋಟಿ ರೂ.ಗೆ ಕುದುರಿದ್ದು ಹೇಗೆ ಎಂದು ಪ್ರಶ್ನಿಸಿದ ಗೋಹಿಲ್ ಇದರಲ್ಲಿ ಭ್ರಷ್ಟಾಚಾರ ಅಡಗಿರುವುದು ಸ್ಪಷ್ಟವಿದೆ ಎಂದು ಆರೋಪಿಸಿದರು.