ಮಧ್ಯಪ್ರದೇಶ : ಹೆತ್ತ ತಾಯಿಯ ಮೇಲೆ ಮಗನಿಂದ ಅತ್ಯಾಚಾರ, ಅರೆಸ್ಟ್
Team Udayavani, Sep 4, 2018, 4:35 PM IST
ಬರ್ವಾನಿ, ಮಧ್ಯ ಪ್ರದೇಶ : 45 ವರ್ಷ ಪ್ರಾಯದ ಹೆತ್ತ ತಾಯಿಯ ಮೇಲೆ 30ರ ಹರೆಯದ ವಿವಾಹಿತ ಮಗನು ಅತ್ಯಾಚಾರ ನಡೆಸಿದ ಅತ್ಯಂತ ನಿರ್ಲಜ್ಜೆಯ ಘಟನೆ ಜಿಲ್ಲೆಯ ಸುರಾನಿ ಗ್ರಾಮದಲ್ಲಿನ ಮನೆಯೊಂದರಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ರೇಪ್ ಕೃತ್ಯ ಎಸಗಿರುವ ಆರೋಪಿ ಮಗನನ್ನು ಅವರು ಬಂಧಿಸಿದ್ದಾರೆ.
ಈ ಘಟನೆ ಸೆ.2ರ ಭಾನುವಾರ ರಾತ್ರಿ ನಡೆದಿದೆ. ಮಹಿಳೆಯು ಮನೆಯಲ್ಲಿ ನಿದ್ರಿಸಿಕೊಂಡಿದ್ದಾಗ ಆಕೆಯ ಮಗ ಆಕೆಯ ಮೇಲೆ ಮುಗಿಬಿದ್ದ. ಆತನ ವಿಕಲಾಂಗ ತಂದೆಯು ಘಟನೆಯ ವೇಳೆ ಮನೆಯಲ್ಲಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿ ಮಗನಿಗೆ ಮದುವೆಯಾಗಿದ್ದು ಮೂವರು ಮಕ್ಕಳಿದ್ದಾರೆ. ಮಗನ ಅತ್ಯಾಚಾರವನ್ನು ತಾಯಿಯು ಪ್ರತಿರೋಧಿಸಿದಾಗ ಆಕೆಯ ಕುತ್ತಿಗೆಯನ್ನು ಕತ್ತಿಯಿಂದ ಒತ್ತಿ ಹಿಡಿದ ಮಗನು ತನ್ನ ಹೀನ ಕೃತ್ಯವನ್ನು ಮುಗಿಸಿದ್ದಾನೆ ಎಂದು ಸೇಂಧವಾ ಪೊಲೀಸ್ ಠಾಣಾಧಿಕಾರಿ ದಿನೇಶ್ ಚೌಹಾಣ್ ತಿಳಿಸಿದ್ದಾರೆ.
ಕಾಮಾಂಧ ಮಗನ ಈ ನಿರ್ಲಜ್ಜ ಕೃತ್ಯವನ್ನು ಆತನ 7 ವರ್ಷ ಪ್ರಾಯದ ಪುತ್ರನು ವೀಕ್ಷಿಸಿದ್ದಾನೆ ಎಂದವರು ಹೇಳಿದರು.
ಕಾಮಾಂಧ ಮಗನ ಕೈಯಿಂದ ಹೇಗೋ ತಪ್ಪಿಸಿಕೊಂಡ ಆತನ ತಾಯಿ ಆ ನಡು ರಾತ್ರಿಯಲ್ಲೇ ತನ್ನ ಮೂವರು ಮೊಮ್ಮಕ್ಕಳೊಂದಿಗೆ ಸಮೀಪದ ಹೊಲಕ್ಕೆ ಓಡಿ ಹೋದಳು .
ಸೋಮವಾರ (ಸೆ.3) ಆಕೆ ತನ್ನ ಮೇಲಾದ ಹೇಯ ಕೃತ್ಯವನ್ನು ಸಂಬಂಧಿಕರಿಗೆ ತಿಳಿಸಿದಾಗ ಅವರು ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದರು. ಪೊಲೀಸರು ಆರೋಪಿ, ಕಾಮಾಂಧ ಮಗನನ್ನು ಬಂಧಿಸಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
MUST WATCH
ಹೊಸ ಸೇರ್ಪಡೆ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ
ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ