CONNECT WITH US  

2019ರಲ್ಲಿ ಗೆದ್ದು ಬಂದರೆ ರಫೇಲ್‌ ಮಧ್ಯವರ್ತಿಗಳಿಗೆ ಜೈಲು: ಕಾಂಗ್ರೆಸ್

ಹೊಸದಿಲ್ಲಿ : ''2019ರ ಲೋಕಸಭಾ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ ರಫೇಲ್‌ ಫೈಟರ್‌ ಜೆಟ್‌ ವ್ಯವಹಾರದ ಎಲ್ಲ ಮಧ್ಯವರ್ತಿಗಳನ್ನು  ಮತ್ತು ಫ‌ಲಾನುಭವಿಗಳನ್ನು ದಂಡನೆಗೆ ಗುರಿಪಡಿಸಿ ಜೈಲಿಗೆ ಅಟ್ಟುತ್ತೇವೆ'' ಎಂದು ಕಾಂಗ್ರೆಸ್‌ ಇಂದು ಬುಧವಾರ ಹೇಳಿದೆ.

ಕಾನ್ಪುರದಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಿಯಾಂಕಾ ಚತುರ್ವೇದಿ, ರಫೇಲ್‌ ಫೈಟರ್‌ ಜೆಟ್‌ ವಹಿವಾಟಿನಿಂದ ದೇಶಕ್ಕೆ 41,000 ಕೋಟಿ ರೂ ನಷ್ಟವಾಗಿದೆ ಎಂದು ಆರೋಪಿಸಿದರು. 

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರ ಮತ್ತು ಫ್ರಾನ್ಸ್‌ ಸರಕಾರದ ನಡುವೆ ಏರ್ಪಟ್ಟಿರುವ ರಫೇಲ್‌ ಫೈಟರ್‌ ಜೆಟ್‌ ಖರೀದಿ ವ್ಯವಹಾರದ ದಾಖಲೆ ಪತ್ರಗಳನ್ನು ಸುದ್ದಿಗೋಷ್ಠಿಯಲ್ಲಿ ಮಂಡಿಸಿದ ಪ್ರಿಯಾಂಕಾ, "ಹೊಸದಾಗಿ ನಿಗದಿಯಾಗಿರುವ ದರವನ್ನು ರಫೇಲ್‌ ಉತ್ಪಾದಕ ಕಂಪೆನಿ ಬಹಿರಂಗಪಡಿಸಬಹುದಾದರೆ ಅದನ್ನೇ ಸಂಸತ್ತಿನಲ್ಲಿ ಬಹಿರಂಗಪಡಿಸುವುದಕ್ಕೆ ಕೇಂದ್ರಕ್ಕೇನು ಅಡ್ಡಿ' ಎಂದು ಪ್ರಶ್ನಿಸಿದರು. 

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರಫೇಲ್‌ ಡೀಲ್‌ ಕುರಿತಾದ ತನಿಖೆಗೆ ಜಂಟಿ ಸಂಸದೀಯ ಸಮಿತಿಯನ್ನು ರೂಪಿಸಬೇಕೆಂದು ಈ ಹಿಂದೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಮಂಡಿಸಿದ್ದ ಬೇಡಿಕೆಯನ್ನು ಕೇಂದ್ರ ಸರಕಾರ ಪುರಸ್ಕರಿಸದಿರುವುದನ್ನು ಕಾಂಗ್ರೆಸ್‌ ನಾಯಕಿ ಪ್ರಶ್ನಿಸಿದರು. 


Trending videos

Back to Top