CONNECT WITH US  

ಹೋರಾಟಗಾರರ ಗೃಹ ಬಂಧನ ವಿಸ್ತರಣೆ

ಹೊಸದಿಲ್ಲಿ: ಪುಣೆ ಪೊಲೀಸರು ಆ.28ರಂದು ಬಂಧಿಸಿದ್ದ ಐವರು ಹೋರಾಟಗಾರರ ಗೃಹ ಬಂಧನ ಅವಧಿಯನ್ನು ಸುಪ್ರೀಂಕೋರ್ಟ್‌ ಸೆ.12ರ ವರೆಗೆ ವಿಸ್ತರಿಸಿದೆ. ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ನೇತೃತ್ವದ ಪೀಠ ಈ ಆದೇಶ ನೀಡಿದೆ. ಆದರೆ ನ್ಯಾಯಪೀಠದಲ್ಲಿದ್ದ ನ್ಯಾ| ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ| ಎ.ಎಂ.ಖಾನ್ವಿಲ್ಕರ್‌ ಅವರು ಪುಣೆಯ ಸಹಾಯಕ ಪೊಲೀಸ್‌ ಆಯುಕ್ತ  ನೀಡಿದ ಹೇಳಿಕೆಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅವರು ನ್ಯಾಯಾಂಗಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಕಟುವಾಗಿ ಆಕ್ಷೇಪಿಸಿಸಿದ್ದಾರೆ. ಪ್ರಕರಣದಲ್ಲಿ ಸುಪ್ರೀಕೋರ್ಟ್‌ ಈ ಹಂತದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ ಎಂದು ಅಧಿಕಾರಿ ಹೇಳಿರುವುದು ಪ್ರಶ್ನಾರ್ಹ ಎಂದಿದ್ದಾರೆ. ಇನ್ನೊಂದೆಡೆ  ಮಹಾರಾಷ್ಟ್ರ ಪೊಲೀಸರ ಕ್ರಮದ ಬಗ್ಗೆ ಬಾಂಬೆ ಹೈಕೋರ್ಟ್‌ ಕೂಡ ಕಟುವಾಗಿ ಟೀಕಿಸಿದೆ. 


Trending videos

Back to Top