CONNECT WITH US  

ತೆಂಗಿನೆಣ್ಣೆ ವಿಷ ಎಂದ ತಜ್ಞೆಗೆ  ನೋಟಿಸ್‌

ಹೊಸದಿಲ್ಲಿ: ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ತೆಂಗಿನೆಣ್ಣೆ ವಿಷ ಎಂಬುದಾಗಿ ಹೇಳಿದ್ದ ಹಾರ್ವರ್ಡ್‌ ವಿಶ್ವವಿದ್ಯಾಲಯದ ವಿಜ್ಞಾನಿ ಕೆರಿನ್‌ ಮಿಶೆಲ್ಸ್‌ಗೆ ಇದೀಗ ಭಾರತ ನೋಟಿಸ್‌ ನೀಡಿದೆ. ಹಾರ್ವಡ್‌ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್‌ ಆಗಿರುವ ಕೆರಿನ್‌ ಮಿಶೆಲ್ಸ್‌ ಹೇಳಿಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರ ವಿರೋಧ ಅಭಿಪ್ರಾಯವನ್ನು ಹುಟ್ಟುಹಾಕಿತ್ತು. ಭಾರತದಲ್ಲಂತೂ ವ್ಯಾಪಕವಾಗಿ ಸಾವಿರಾರು ವರ್ಷಗಳಿಂದ ಬಳಕೆಯಲ್ಲಿರುವ ತೆಂಗಿನೆಣ್ಣೆ ಬಗ್ಗೆ ಯಾವ ಆಧಾರದಲ್ಲಿ ಈ ಹೇಳಿಕೆಯನ್ನು ಕೆರಿನ್‌ ನೀಡಿದ್ದಾರೆ. ತಕ್ಷಣವೇ ಈ ಸಂಬಂಧ ಕ್ರಮ ತೆಗೆದುಕೊಳ್ಳಬೇಕು ಎಂಬುದಾಗಿ ಹಾರ್ವರ್ಡ್‌ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥರಿಗೆ ಭಾರತದ ತೋಟಗಾರಿಕೆ ಕಮಿಷನರ್‌ ಬಿ.ಎನ್‌.ಶ್ರೀನಿವಾಸ ಮೂರ್ತಿ ನೋಟಿಸ್‌ ನೀಡಿದ್ದಾರೆ. 


Trending videos

Back to Top