CONNECT WITH US  

ತೆಲಂಗಾಣ ವಿಧಾನಸಭೆ ವಿಸರ್ಜನೆ

ಹೈದರಾಬಾದ್‌: ಒಂಬತ್ತು ತಿಂಗಳು ಮೊದಲೇ ತೆಲಂಗಾಣ ವಿಧಾನಸಭೆ ವಿಸರ್ಜನೆ ಮಾಡಿರುವ ಸಿಎಂ ಕೆ.ಸಿ.ಚಂದ್ರ ಶೇಖರರಾವ್‌, ರಾಜಕೀಯ ವಿರೋಧಿಗಳಿಗೆ ಶಾಕ್‌ ನೀಡಿದ್ದಾರೆ. ಮಳೆಯಿಂದ ರಾಜ್ಯದಲ್ಲಿ ರೈತರು ಖುಷಿಯಲ್ಲಿದ್ದಾರೆ. ಇಂಥ ಖುಷಿಯ ವಾತಾವರಣದಲ್ಲಿ ಚುನಾವಣೆ ನಡೆದರೆ ಅನುಕೂಲ ಎಂಬ ಉದ್ದೇಶದಿಂದ ಅವಧಿಗೆ ಮುನ್ನ ವಿಧಾನಸಭೆ ವಿಸರ್ಜಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಗುರುವಾರ ಬೆಳಗ್ಗೆ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ರಾಜ್ಯಪಾಲರಿಗೆ ತಮ್ಮ ನಿರ್ಧಾರ ತಿಳಿಸಿದ್ದಾರೆ. ಈ ಪ್ರಸ್ತಾವನೆಯನ್ನು ಅಂಗೀಕರಿಸಿರುವ ರಾಜ್ಯಪಾಲ ಇ.ಎಸ್‌.ಎಲ್‌.ನರಸಿಂಹನ್‌ ಅವರು, ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಚಂದ್ರಶೇಖರ್‌ ರಾವ್‌ಗೆ ಸೂಚಿಸಿದ್ದಾರೆ. ಜತೆಯಲ್ಲೇ ವಿಧಾನಸಭೆ ವಿಸರ್ಜಿಸಿರುವ ನಿರ್ಧಾರವನ್ನು ಕೇಂದ್ರ ಗೃಹ ಇಲಾಖೆ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೂ ತಲುಪಿಸಲಿದ್ದಾರೆ. ಎಲ್ಲವೂ ಅಂದುಕೊಂಡಂತಾದರೆ ಡಿಸೆಂಬರ್‌ನಲ್ಲಿ ನಡೆಯಲಿರುವ ನಾಲ್ಕು ರಾಜ್ಯಗಳ ಚುನಾವಣೆ ಜತೆಗೆ
ಅಥವಾ ಮುಂದಿನ ಮಾರ್ಚ್‌ನೊಳಗೆ ತೆಲಂಗಾಣದಲ್ಲೂ ಎಲೆಕ್ಷನ್‌ ನಡೆಸುವ ಸಾಧ್ಯತೆ ಇದೆ. 

ಅಭ್ಯರ್ಥಿಗಳ ಘೋಷಣೆ: ಈ ಮಧ್ಯೆ, ಗುರುವಾರ ಸಂಜೆ ಚಂದ್ರಶೇಖರರಾವ್‌ ಅವರು 105 ಸ್ಥಾನಗಳಿಗೆ ಅಭ್ಯರ್ಥಿಗಳನ್ನೂ ಘೋಷಣೆ ಮಾಡಿದ್ದಾರೆ. ಇಬ್ಬರು ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ಉಳಿದ 14 ವಿಧಾನಸಭೆ ಕ್ಷೇತ್ರಗಳಿಗೆ ಶೀಘ್ರದಲ್ಲೇ ಅಭ್ಯರ್ಥಿಗಳನ್ನು ಘೋಷಣೆ ಮಾಡುವುದಾಗಿ ಹೇಳಿದ್ದಾರೆ.

ರಾಹುಲ್‌ ಬಫ‌ೂನ್‌: ವಿಧಾನಸಭೆ ವಿಸರ್ಜನೆ ಮಾಡುತ್ತಿದ್ದಂತೆ ಚಂದ್ರಶೇಖರರಾವ್‌ ಅವರ ಆಕ್ರೋಶಕ್ಕೆ ತುತ್ತಾಗಿರುವುದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ. ಇವರನ್ನು ಬಫ‌ೂನ್‌ ಎಂದು ಕರೆದಿರುವ ಅವರು, ರಾಹುಲ್‌ ತೆಲಂಗಾಣಕ್ಕೆ ಪ್ರಚಾರಕ್ಕೆ ಬಂದರೆ ನಮಗೇ ಹೆಚ್ಚು ಅನುಕೂಲ ಎಂದು ಹೇಳಿದ್ದಾರೆ. ರಾಹುಲ್‌ ಏನು ಎಂಬುದು ಎಲ್ಲರಿಗೂ ಗೊತ್ತು, ಅವರು ಸಂಸತ್‌ನಲ್ಲಿ ಪ್ರಧಾನಿಯದ್ದು ಆಲಂಗಿಸಿದ್ದು, ನಂತರ ಕಣ್ಣು ಹೊಡೆದದ್ದು ನೋಡಲಿಲ್ಲವೇ ಎಂದೂ ಪ್ರಶ್ನೆ ಮಾಡಿದ್ದಾರೆ. 

ಅವಧಿಗೆ ಮುನ್ನವೇ ಏಕೆ ವಿಸರ್ಜನೆ?: ಸರ್ಕಾರದ ಅವಧಿ ಇನ್ನೂ 9 ತಿಂಗಳು ಇರುವಾಗಲೇ ಕೆಸಿಆರ್‌ ಅವರು ವಿಧಾನಸಭೆ ವಿಸರ್ಜನೆ ಮಾಡಿರುವುದರ ಹಿಂದೆ ರಾಷ್ಟ್ರ ರಾಜಕಾರಣದ ಮಹತ್ವಾಕಾಂಕ್ಷೆಗಳಿವೆ ಎಂದು ಹೇಳಲಾಗುತ್ತಿದೆ. ತೆಲಂಗಾಣದಲ್ಲಿ ಪುತ್ರನನ್ನು ಸಿಎಂ ಸ್ಥಾನದಲ್ಲಿ ಕೂರಿಸಿ ದೆಹಲಿಗೆ ಹೋಗುವ ಚಿಂತನೆಯಲ್ಲಿದ್ದಾರೆ ಎಂದು ಕೆಲವು ನಾಯಕರು ವಿಶ್ಲೇಷಿಸಿದ್ದಾರೆ. ಇದಷ್ಟೇ ಅಲ್ಲ, ಲೋಕಸಭೆ ಚುನಾವಣೆ ವೇಳೆ ಫೆಡರಲ್‌ ಫ್ರಂಟ್‌ ಜತೆ ಹೋಗುವುದೋ ಅಥವಾ ಎನ್‌ಡಿಎ ಜತೆ ಹೋಗುವುದೋ ಎಂಬ ಗೊಂದಲಗಳುಂಟಾಗುತ್ತವೆ. ಆದರೆ, ಈಗಲೇ
ಚುನಾವಣೆ ನಡೆದು ಹೆಚ್ಚು ಸ್ಥಾನ ಗಳಿಸಿದರೆ ಆಗ ಖಚಿತವಾದ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಚಿಂತನೆಯಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಹೇಳಲಾಗುತ್ತಿದೆ.

ಯಾರಿಗೆ ನಷ್ಟ?: ತೆಲಂಗಾಣದಲ್ಲಿ ಬಿಜೆಪಿ ಪ್ರಭಾವ ಅಷ್ಟಕ್ಕಷ್ಟೇ. ಆದರೆ ಕಾಂಗ್ರೆಸ್‌ ಮತ್ತು ಟಿಡಿಪಿ ಪ್ರಮುಖ ವಿರೋಧಪಕ್ಷಗಳು. ಈಗ ಅಭ್ಯರ್ಥಿಗಳ ಘೋಷಣೆ ಮಾಡಿ ಕ್ಷೇತ್ರಗಳಲ್ಲಿ ಕೆಲಸ ಮಾಡಲು ನಿಯೋಜಿಸುವ ಮೂಲಕ ಕಾಂಗ್ರೆಸ್‌ ಮತ್ತು ಟಿಡಿಪಿಗೆ ಸಿದಟಛಿತೆಗೂ ಅವಕಾಶ ಮಾಡಿಕೊಡದ ಆಲೋಚನೆ ಕೆಸಿಆರ್‌ ಅವರದ್ದು.

6 ಅದೃಷ್ಟದ ಸಂಖ್ಯೆ: ತೆಲಂಗಾಣ ಸಿಎಂ ಚಂದ್ರಶೇಖರರಾವ್‌ ಅವರಿಗೂ 6ಕ್ಕೂ ಅವಿನಾಭಾವ ನಂಟಿದೆ. ಇದುವರೆಗೂ ಜ್ಯೋತಿಷಿಗಳನ್ನು ಕೇಳದೇ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳದ ಕೆಸಿಆರ್‌. ವಿಧಾನಸಭೆ ವಿಸರ್ಜಿಸಿದ್ದು ಇದೇ 6 ರಂದು. ಏಕೆಂದರೆ, ಕಳೆದ 2 ರಂದೇ ಈ ಸಂಬಂಧ ನಿರ್ಧಾರ ತೆಗೆದುಕೊಳ್ಳಬೇಕಿತ್ತಾದರೂ, ಜ್ಯೋತಿಷಿಗಳ ಸಲಹೆಯಂತೆ 6ನೇ ತಾರೀಕಿಗೆ ಮುಂದೂಡಿದ್ದರು.

Trending videos

Back to Top