CONNECT WITH US  

'ಭಾರತ್‌ ಬಂದ್‌' ಬಿಜೆಪಿಯ ಚುನಾವಣಾ ಸಂಚು: ಮಾಯಾವತಿ ಟೀಕೆ

ಹೊಸದಿಲ್ಲಿ : ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿ ವಿರೋಧದ ಭಾರತ್‌ ಬಂದ್‌ "ಬಿಜೆಪಿಯ ಚುನಾವಣಾ ಸಂಚು'' ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಟೀಕಿಸಿದ್ದಾರೆ.

ಎಸ್‌ಸಿ/ಎಸ್‌ಟಿ ಕಾಯಿದೆ ತಿದ್ದುಪಡಿ ವಿರುದ್ದ ಮೇಲ್ವರ್ಗದ ಜಾತಿಯವರು ಮತ್ತು ಒಬಿಸಿ ಸಮೂಹದವರು ನಡೆಸಿರುವ ಭಾರತ್‌ ಬಂದ್‌, ಲೋಕಸಭಾ ಚುನಾವಣೆಗೆ ಮುನ್ನ ಜನರನ್ನು ಜಾತಿ ನೆಲೆಯಲ್ಲಿ ಒಡೆಯಲು ಬಿಜೆಪಿ ನಡೆಸಿರುವ ಚುನಾವಣಾ ಸಂಚಾಗಿದೆ ಎಂದು ಮಾಯಾವತಿ ಹೇಳಿದರು.  

ಈ ದಿನಗಳಲ್ಲಿ ದೇಶವನ್ನು ಜ್ವಲಂತವಾಗಿ ಕಾಡುತ್ತಿರುವ ಪೆಟ್ರೋಲ್‌ ಡೀಸೆಲ್‌ ಬೆಲೆ ಏರಿಕೆ ಸಮಸ್ಯೆಯಿಂದ ಜನರ ಮನಸ್ಸನ್ನು ಬೇರೆಡೆಗೆ ಹರಿಸಲು ಬಿಜೆಪಿ ನಡೆಸಿರುವ ಕುಟಿಲೋಪಾಯ ಇದಾಗಿದೆ ಎಂದು ಮಾಯವತಿ ಆರೋಪಿಸಿದರು. 

Trending videos

Back to Top