CONNECT WITH US  

ವರ್ಷದ ಗರಿಷ್ಠ ಮಟ್ಟಕ್ಕೆ ಪೆಟ್ರೋಲ್‌, ಡೀಸೆಲ್‌ ದರ

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಒಂದು ವರ್ಷಕ್ಕೆ ಹೋಲಿಕೆ ಮಾಡಿದರೆ ಶುಕ್ರವಾರ ಗರಿಷ್ಠ ಮಟ್ಟಕ್ಕೆ ತಲುಪಿದೆ. ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್‌ ಪೆಟ್ರೋಲ್‌ಗೆ 79.99 ರೂ., ಮುಂಬಯಿಯಲ್ಲಿ 87.39 ರೂ., ಬೆಂಗಳೂರಿನಲ್ಲಿ 82.19 ರೂ.ಗೆ ಏರಿಕೆಯಾಗಿದೆ. ಹೊಸದಿಲ್ಲಿಯಲ್ಲಿ ಪ್ರತಿ ಲೀಟರ್‌ಗೆ 48 ಪೈಸೆ ಏರಿಕೆಯಾಗಿದ್ದರೆ, ಬೆಂಗಳೂರಿನಲ್ಲಿ 21 ಪೈಸೆ ಹೆಚ್ಚಾಗಿದೆ. 

ಪ್ರತಿ ಲೀಟರ್‌ ಡೀಸೆಲ್‌ ದರ ಹೊಸದಿಲ್ಲಿಯಲ್ಲಿ 72.07 ರೂ., ಮುಂಬಯಿಯಲ್ಲಿ 76.51 ರೂ., ಬೆಂಗಳೂರಿನಲ್ಲಿ 73.93 ರೂ. ಆಗಿದೆ. ಹೊಸದಿಲ್ಲಿಯಲ್ಲಿ ಡೀಸೆಲ್‌ ದರ 47 ಪೈಸೆ, ಬೆಂಗಳೂರಿನಲ್ಲಿ 21 ಪೈಸೆಯಷ್ಟು ಏರಿಕೆಯಾಗಿದೆ. ಇದೇ ವೇಳೆ ಭುವನೇಶ್ವರದಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ತೈಲೋತ್ಪನ್ನ ಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದು ಅಗತ್ಯ ಎಂದಿದ್ದಾರೆ.


Trending videos

Back to Top