CONNECT WITH US  

ಪೆಟ್ರೋಲ್‌, ಡೀಸೆಲ್‌ ಬೆಲೆ ಮತ್ತೆ ಏರಿಕೆ;ಮೆಟ್ರೋ ಸಿಟಿ ದರ ಹೀಗಿವೆ

ಹೊಸದಿಲ್ಲಿ : ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ ಲೀಟರ್‌ ಬೆಲೆ 80 ರೂ. ದಾಟಿದೆ. ಇಂದು ಶನಿವಾರ ದಿಲ್ಲಿಯಲ್ಲಿ ಪೆಟ್ರೋಲ್‌ ಲೀಟರ್‌ ಬೆಲೆ 80.38 ಆಗಿದೆ; ಡೀಸೆಲ್‌ ಲೀಟರ್‌ ಬೆಲೆ 72.51 ರೂ. ಆಗಿದೆ. 

ಇಂಡಿಯನ್‌ ಆಯಿಲ್‌ ಕಾರ್ಪೊರೇಶನ್‌ ಪ್ರಕಾರ ಪೆಟ್ರೋಲ್‌ ಬೆಲೆ ಲೀಟರಿಗೆ 79.99 ರೂ. ಇದ್ದಲ್ಲಿಂದ 39 ಪೈಸೆ ಏರಿದೆ; ಡೀಸೆಲ್‌ ಲೀಟರ್‌ ಬೆಲೆ 72.07 ರೂ. ಇದ್ದಲ್ಲಿಂದ 44 ಪೈಸೆ ಏರಿದೆ.

ಮುಂಬಯಿಯಲ್ಲಿ ಪೆಟ್ರೋಲ್‌ ಲೀಟರ್‌ ಬೆಲೆ 87.77 ರೂ. ಮತ್ತು ಡೀಸೆಲ್‌ ಲೀಟರ್‌ ಬೆಲೆ 76.98 ರೂ. ಆಗಿದೆ. 

ವಿವಿಧ ಮಹಾನಗರಗಳಲ್ಲಿ ಇಂದು ಚಾಲ್ತಿಗೆ ಬಂದಿರುವ ಪೆಟ್ರೋಲ್‌ ಡೀಸೆಲ್‌ ಬೆಲೆಗಳು ಈ ಕೆಳಗಿನಂತಿವೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ದಿನೇ ದಿನೇ ಏರುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್‌, ಡೀಸೆಲ್‌ ದರಗಳು ಏರುತ್ತಿವೆ ಎನ್ನಲಾಗಿದೆ. ಡಾಲರ್‌ ಎದುರು ರೂಪಾಯಿ ವಿನಿಮಯ ದರ ಪಾತಾಳಕ್ಕೆ ಇಳಿಯುತ್ತಿರುವುದಕ್ಕೆ ಇದೇ ಕಾರಣವೆಂದು ತಿಳಿಯಲಾಗಿದೆ. 

Trending videos

Back to Top