CONNECT WITH US  

ಸಮುದ್ರದಲ್ಲಿ ಮುಳುಗುತ್ತಿದ್ದಾತನನ್ನು ರಕ್ಷಿಸಿದ ನೌಕಾಪಡೆ ನಾವಿಕರು

ಮುಂಬಯಿ : ಮೆರೈನ್‌ ಡ್ರೈವ್‌ ಸಮೀಪ ಅರಬ್ಬಿ ಸಮುದ್ರದಲ್ಲಿ ಮುಳುಗುತ್ತಿದ್ದ ವ್ಯಕ್ತಿಯನ್ನು ನೌಕಾಪಡೆ ನಾವಿಕರು ರಕ್ಷಿಸಿರುವ ಘಟನೆ ವರದಿಯಾಗಿದೆ.

ಸಮುದ್ರದಲ್ಲಿ  ವ್ಯಕ್ತಿಯೊಬ್ಬ ಮುಳುಗುತ್ತಿದ್ದುದನ್ನು ನೌಕಾಪಡೆಯ ಮೂವರು ನಾವಿಕರು ಕಂಡರು. ಕೂಡಲೇ ಸಮುದ್ರಕ್ಕೆ ಜಿಗಿದ ಅವರು ವ್ಯಕ್ತಿಯನ್ನು ಪಾರುಗೊಳಿಸಿದರು. ಈ ಘಟನೆ ಭಾನುವಾರ ನಡೆಯಿತು. 

ರಕ್ಷಿಸಲ್ಪಟ್ಟ ವ್ಯಕ್ತಿಗೆ ಒಡನೆಯೇ ಕಾರ್ಡಿಯೋ ಪುಲ್ಮನರಿ ರಿಸಸ್ಸಿಟೇಶನ್‌ ನೀಡಲಾದಾಗ ಆತನಿಗೆ ಪ್ರಜ್ಞೆ ಮರುಕಳಿಸಿತು. ಬಳಿಕ ಆತನನ್ನು ಪೊಲೀಸರಿಗೆ ಒಪ್ಪಿಸಲಾಯಿತು. 

Trending videos

Back to Top