ED ಆರೋಪ ಸುಳ್ಳು, ನಿರಾಧಾರ: ಮೆಹುಲ್ ಚೋಕ್ಸಿ ವಿಡಿಯೋ
Team Udayavani, Sep 11, 2018, 4:37 PM IST
ಹೊಸದಿಲ್ಲಿ : 16,000 ಕೋಟಿ ರೂ. ಪಂಜಾಬ್ ನ್ಯಾಶನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿ “ಜಾರಿ ನಿರ್ದೇಶನಾಲಯ ನನ್ನ ವಿರುದ್ಧ ಮಾಡಿರುವ ಎಲ್ಲ ಆರೋಪಗಳು ಸುಳ್ಳು ಮತ್ತು ನಿರಾಧಾರ” ಎಂದು ಹಗರಣದ ಪ್ರಮುಖ ಆರೋಪಿಯಾಗಿರುವ ಮತ್ತು ಪ್ರಕೃತ ಆಂಟಿಗುವಾದಲ್ಲಿರುವ ವಜ್ರಾಭರಣ ಉದ್ಯಮಿ ಮೆಹುಲ್ ಚೋಕ್ಸಿ ಹೇಳಿದ್ದು ಅಲ್ಲಿಂದಲೇ ಈ ಕುರಿತ ತನ್ನ ವಿಡಿಯೋ ಸಂದೇಶ ರವಾನಿರುವುದಾಗಿ ಎಎನ್ಐ ವರದಿ ಮಾಡಿದೆ.
ಪಿಎನ್ಬಿ ಬಹುಕೋಟಿ ಹಗರಣದ ಇನ್ನೋರ್ವ ಮುಖ್ಯ ಆರೋಪಿಯಾಗಿ ವಿದೇಶಕ್ಕೆ ಪಲಾಯನ ಮಾಡಿರುವ ನೀರವ್ ಮೋದಿ ಅವರ ಚಿಕ್ಕಪ್ಪನಾಗಿರುವ ಮೆಹುಲ್ ಚೋಕ್ಸಿ ಕಳೆದವರ್ಷವೇ ಆಂಟಿಗುವಾ ಮತ್ತು ಬರ್ಬುಡಾ ಪೌರತ್ವವನ್ನು ಪಡೆದುಕೊಂಡಿದ್ದು ಪಿಎನ್ಬಿ ಹಗರಣದ ಬಳಿಕ ಅಲ್ಲಿ ಸುರಕ್ಷಿತರಾಗಿದ್ದಾರೆ.
ಮೆಹುಲ್ ಚೋಕ್ಸಿ ತನ್ನ ವಿಡಿಯೋ ಸಂದೇಶದಲ್ಲಿ ತನ್ನ ಪಾಸ್ ಪೋರ್ಟ್ ಅಮಾನತುಗೊಳಿಸಿರುವ ಅಧಿಕಾರಿಗಳ ಕ್ರಮವನ್ನು ಪ್ರಶ್ನಿಸಿರುವುದಾಗಿ ಎಎನ್ಐ ವರದಿ ಮಾಡಿದೆ.
ಎಎನ್ಐ ಕೇಳಿದ್ದ ಎಲ್ಲ ಪ್ರಶ್ನೆಗಳಿಗೆ ಚೋಕ್ಸಿ ಅವರು ವಿಡಿಯೋದಲ್ಲಿ ತಮ್ಮ ವಕೀಲರಿಗೆ ಉತ್ತರಿಸಿದ್ದಾರೆ.