ಸೋದರಿಯ ಮದುವೆಯಂದೇ ಬಲಿಯಾದ ಉಗ್ರ
Team Udayavani, Sep 12, 2018, 11:42 AM IST

ಶ್ರೀನಗರ: ಜಮ್ಮು-ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಇಬ್ಬರು ಲಷ್ಕರ್ ಉಗ್ರರನ್ನು ಭದ್ರತಾ ಪಡೆ ಮಂಗಳವಾರ ಹೊಡೆದುರುಳಿಸಿದೆ. ಮೃತರಲ್ಲಿ ಒಬ್ಟಾತ ಬಾರಾಮುಲ್ಲಾದ ಲಿಯಾಖತ್ ಅಹ್ಮಲ್ ಲೋನ್. ಬಾರಾಮುಲ್ಲಾದ ತನ್ನ ಮನೆಯಲ್ಲಿ ಸಹೋದರಿಯ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದ ಸಂದರ್ಭದಲ್ಲೇ ಲೋನ್ ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದು, ಮದುವೆ ಮನೆ ಸಾವಿನ ಮನೆಯಾಗಿ ಮಾರ್ಪಾಡಾಯಿತು.