CONNECT WITH US  

ಶಾಸಕರು, ಸಂಸದರ ವಿರುದ್ಧ ಕೇಸ್‌: ಬಿಹಾರ, ಬಂಗಾಲಕ್ಕೆ ಅಗ್ರಸ್ಥಾನ

ಹೊಸದಿಲ್ಲಿ: ಶಾಸಕರು ಮತ್ತು ಸಂಸತ್‌ ಸದಸ್ಯರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಕೇಸುಗಳ ಪಟ್ಟಿಯಲ್ಲಿ ಕ್ರಮವಾಗಿ ಬಿಹಾರ, ಪಶ್ಚಿಮ ಬಂಗಾಲ, ಕೇರಳ ಮೊದಲ ಮೂರು ಸ್ಥಾನದಲ್ಲಿವೆ. ಕೇಂದ್ರ ಸರಕಾರವೇ ಈ ಮಾಹಿತಿ ಕ್ರೋಡೀಕರಿಸಿರುವ ಬಗ್ಗೆ "ನ್ಯೂಸ್‌ 18' ವರದಿ ಮಾಡಿದೆ. ಬಿಹಾರದಲ್ಲಿ ಒಟ್ಟು 260 ಕೇಸುಗಳಿವೆ. ಈ ಪೈಕಿ 11 ಪ್ರಕರಣಗಳು ಮಾತ್ರ 6 ತಿಂಗಳ ಅವಧಿಯಲ್ಲಿ ಇತ್ಯರ್ಥವಾಗಿವೆ. 

ಪಶ್ಚಿಮ ಬಂಗಾಲದಲ್ಲಿ 215 ಕೇಸುಗಳಿದ್ದು, ಇದು ವರೆಗೆ ಯಾವುದೇ ಪ್ರಕರಣ ಇತ್ಯರ್ಥವಾಗಿಲ್ಲ. ಕೇರಳದಲ್ಲಿ 178 ಪ್ರಕರಣಗಳು ಶಾಸಕರು, ಸಂಸದರ ವಿರುದ್ಧ ದಾಖಲಾಗಿದೆ. ಅವುಗಳ ಪೈಕಿ ಯಾವುದೇ ಒಂದು ಕೇಸು ಇತ್ಯರ್ಥವಾಗಿರುವ ಬಗ್ಗೆ ಮಾಹಿತಿ ಇಲ್ಲವೆಂದು ವರದಿ ಹೇಳಿದೆ. 

ಕರ್ನಾಟಕದಲ್ಲಿ ಶಾಸಕರು, ಸಂಸದರ ವಿರುದ್ಧ 142 ಕೇಸುಗಳು ದಾಖಲಾಗಿವೆ. ಈ ಪೈಕಿ 19 ಇತ್ಯರ್ಥಗೊಂಡಿವೆ. ದೇಶಾದ್ಯಂತ 1,233 ಕ್ರಿಮಿನಲ್‌ ಪ್ರಕರಣಗಳು ವಿಶೇಷ ಕೋರ್ಟ್‌ಗೆ ವಿಚಾರಣೆಗಾಗಿ ವರ್ಗಾವಣೆಯಾಗಿವೆ. ಈ ಪೈಕಿ 136 ಮಾತ್ರ ಇತ್ಯರ್ಥಗೊಂಡಿವೆ. ಸುಪ್ರೀಂಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ವಿಶೇಷ ಕೋರ್ಟ್‌ ಸ್ಥಾಪನೆ ಮಾಡಲಾಗಿದೆ. 


Trending videos

Back to Top