ಟೀಕಿಸಿ ಕ್ಷಮೆ ಕೇಳಿದ ಮೋಹನ್ಲಾಲ್
Team Udayavani, Sep 17, 2018, 10:51 AM IST
ತಿರುವನಂತಪುರ: ಕ್ರೈಸ್ತ ಸನ್ಯಾಸಿನಿ ಮೇಲಿನ ಅತ್ಯಾಚಾರ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ವಿರುದ್ಧ ಸಿಡಿದೆದ್ದಿದ್ದ ಮಲಯಾಳಂ ನಟ ಮೋಹನ್ಲಾಲ್ ಕ್ಷಮೆ ಯಾಚಿಸಿದ್ದಾರೆ.
ಈ ಬಗ್ಗೆ ಅವರು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದು, “ಪತ್ರಿಕೋದ್ಯಮ, ಸಂಸ್ಥೆ ಅಥವಾ ಯಾರಿಗೂ ನೋವು ಉಂಟು ಮಾಡುವ ಉದ್ದೇಶ ಇರಲಿಲ್ಲ’ ಎಂದಿದ್ದಾರೆ.