ಹುಟ್ಟುಹಬ್ಬದ ಗಿನ್ನೆಸ್ ದಾಖಲೆ
Team Udayavani, Sep 19, 2018, 5:08 PM IST
ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು ಗುಜರಾತ್ನ ಪ್ರಸಿದ್ಧ ಬೇಕರಿಯೊಂದು ವಿಶಿಷ್ಟವಾಗಿ ಆಚರಿಸಿದೆ. ಮೋದಿ ಹುಟ್ಟಿದ ದಿನದಂದೇ ಜನಿಸಿದ ಸುಮಾರು 1,200 ಜನರು ದೇಶದ ಹಲವಾರು ಕಡೆಗಳಿಂದ ಬಂದು ಒಂದೆಡೆ ಸೇರಿ ಕೇಕು ಕತ್ತರಿಸಿ ಜನ್ಮದಿನ ಆಚರಿಸಿಕೊಂಡಿದ್ದಾರೆ. ಈ ಕಾರ್ಯಕ್ರಮವು ಈಗ ಗಿನ್ನೆಸ್ ದಾಖಲೆ ಸೃಷ್ಟಿಸುವತ್ತ ಹೆಜ್ಜೆಯಿಟ್ಟಿದೆ.
ಸೂರತ್ನ ಸರ್ಸಾನಾ ವಸ್ತು ಸಂಗ್ರಹಾಲಯ ಕೇಂದ್ರದಲ್ಲಿ ಈ ಕಾರ್ಯಕ್ರಮ ನಡೆದಿದೆ. ಇದನ್ನು “ಅತಿ ದೊಡ್ಡ ಹುಟ್ಟುಹಬ್ಬ ಕಾರ್ಯಕ್ರಮ’ ಎಂಬ ನಿಟ್ಟಿನಲ್ಲಿ ಗಿನ್ನೆಸ್ ದಾಖಲೆಗೆ ಸೇರಿಸುವ ತಯಾರಿ ಕೂಡ ನಡೆಯುತ್ತಿದೆ. ಗುಜರಾತ್ನ ಪ್ರಸಿದ್ಧ “ಅತುಲ್ ಬೇಕರಿ’ ಈ ಕಾರ್ಯಕ್ರಮ ಏರ್ಪಡಿಸಿತ್ತು. 50 ಜನರ 20 ಗುಂಪುಗಳನ್ನು ಮಾಡಿ, ಪ್ರತಿಯೊಬ್ಬರಿಂದಲೂ ಪ್ರತ್ಯೇಕ ಕೇಕುಗಳನ್ನು ಕತ್ತರಿಸಲಾಯಿತು. ಮೋದಿ ಸರಕಾರದ ಪ್ರಸಿದ್ಧ ಯೋಜನೆಗಳ ಹೆಸರುಗಳನ್ನು ಈ ಗುಂಪುಗಳಿಗೆ ಇಡಲಾಗಿತ್ತು. 2012ರಲ್ಲಿ ನೆದರ್ಲೆಂಡ್ನಲ್ಲಿ 228 ಮಂದಿ ಒಟ್ಟಿಗೇ ಜನ್ಮದಿನ ಆಚರಿಸಿ ಗಿನ್ನೆಸ್ ದಾಖಲೆ ಸೃಷ್ಟಿಸಿದ್ದರು. ಅವರ ದಾಖಲೆಯನ್ನು ಗುಜರಾತ್ನ ಕಾರ್ಯಕ್ರಮ ಸರಿಗಟ್ಟಿದೆ.