CONNECT WITH US  

ಉಗ್ರರ ಅಟ್ಟಹಾಸ:ನಾಲ್ವರು ಪೊಲೀಸರ ಅಪಹರಣ; ಮೂವರ ಬರ್ಬರ ಹತ್ಯೆ 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರು ಶುಕ್ರವಾರ ಅಟ್ಟಹಾಸ ಮೆರೆದಿದ್ದು , ನಾಲ್ವರು ಪೊಲೀಸರನ್ನು ಅಪಹರಿಸಿದ್ದು ಮೂವರನ್ನು ಹತ್ಯೆಗೈದಿದ್ದಾರೆ.

ದಕ್ಷಿಣ ಕಾಶ್ಮೀರದ ಶೋಪಿಯಾನ್‌ನಿಂದ ಗುರುವಾರ ರಾತ್ರಿ ಮೂವರು ವಿಶೇಷ ಪೊಲೀಸ್‌ ಅಧಿಕಾರಿಗಳು ಮತ್ತು ಓರ್ವ ಪೊಲೀಸ್‌ ಸಿಬಂದಿಯನ್ನು ಅಪಹರಿಸಿದ್ದರು. ಆ ಪೈಕಿ ಮೂವರು ಶವಗಳಾಗಿ ಪತ್ತೆಯಾಗಿದ್ದಾರೆ. ಇನ್ನೋರ್ವ ಅಧಿಕಾರಿ ನಾಪತ್ತೆಯಾಗಿದ್ದಾರೆ.

ಹಿಜ್‌ಬುಲ್‌ ಮುಜಾಹಿದ್ದೀನ್‌ ಉಗ್ರರು ಕೃತ್ಯ ಎಸಗಿದ್ದು , ಆಡಿಯೋವೊಂದನ್ನು ಬಿಡುಗಡೆ ಮಾಡಿ ಕಾಶ್ಮೀರದ ಎಲ್ಲಾ ವಿಶೇಷ ಪೊಲೀಸ್‌ ಅಧಿಕಾರಿಗಳು ರಾಜೀನಾಮೆ ನೀಡಬೇಕು ಎಂದು ಧಮ್ಕಿ ಹಾಕಲಾಗಿದೆ. 


Trending videos

Back to Top