CONNECT WITH US  

ಹೊಲ್ಯಾಂಡೆ ಪ್ರಕಾರ ಭಾರತದ ಪ್ರಧಾನಿ ಒಬ್ಬ ಕಳ್ಳ!:ರಾಹುಲ್‌ ವಾಗ್ದಾಳಿ 

ಹೊಸದಿಲ್ಲಿ: ಮಾಜಿ ಫ್ರೆಂಚ್‌ ಅಧ್ಯಕ್ಷ ಫ್ರಾಂಕೋಯಿಸ್‌ ಹೊಲ್ಯಾಂಡೆ  ಅವರ ಪ್ರಕಾರ ಭಾರತ ಪ್ರಧಾನ ಮಂತ್ರಿ ಓರ್ವ ಕಳ್ಳ. ಇದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸಿದ ಪರಿ.

ಶನಿವಾರ ಸುದ್ದಿಗೋಷ್ಠಿ ನಡೆಸಿ ತೀವ್ರ ವಾಗ್ದಾ ನಡೆಸಿದ ರಾಹುಲ್‌ ಪ್ರಧಾನಿ ಅವರು ರಫೇಲ್‌ ಡೀಲ್‌ ನ ಭ್ರಷ್ಟಾಚಾರದ ಕುರಿತು ಮೌನ ಮುರಿಯಲಿ. ಇಲ್ಲವಾದಲ್ಲಿ ಪ್ರಧಾನಿ ಭ್ರಷ್ಟಾಚಾರ ಮಾಡುತ್ತಿದ್ದಾರೆ ಎಂದರ್ಥ ಎಂದರು. 

ಸತ್ಯ ಏನು ಎನ್ನುವುದನ್ನು ಪ್ರಧಾನಿ ಮಾತನಾಡಲಿ. ಇಲ್ಲವಾದಲ್ಲಿ ಹೊಲ್ಯಾಂಡೆ ಅವರು ಹೇಳಿದ್ದು ಸತ್ಯ ಎಂದರ್ಥವಾಗುತ್ತದೆ ಎಂದರು. 

ರಫೇಲ್‌ ಡೀಲ್‌ ಕುರಿತಾಗಿ ಜಂಟಿ ಸದನ ಸಮಿತಿಯಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು. 

ರಕ್ಷಣಾ ಸಚಿವರಾಗಿದ್ದವರು ಸುಳ್ಳು ಹೇಳುವ ಮೂಲಕ ಪ್ರಧಾನಿಯನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ ಎಂದರು. 

Trending videos

Back to Top