ಗೋಲ್ಡನ್ ಗ್ಲೋಬ್ ರೇಸ್ನಲ್ಲಿ ಸಿಕ್ಕಿ ಹಾಕಿಕೊಂಡ ನೌಕೆ
Team Udayavani, Sep 23, 2018, 6:00 AM IST
ಕೊಚ್ಚಿ: ದಕ್ಷಿಣ ಹಿಂದೂ ಮಹಾಸಾಗರದಲ್ಲಿ ಗೋಲ್ಡನ್ ಗ್ಲೋಬ್ ರೇಸ್ನಲ್ಲಿ ಭಾಗವಹಿಸಿದ್ದ ಭಾರತೀಯ ನೌಕಾಪಡೆಯ ನೌಕೆ ಚಂಡಮಾರುತಕ್ಕೆ ಸಿಲುಕಿದೆ. ಇದರಲ್ಲಿದ್ದ ನೌಕಾಸೇನೆಯ ಅಧಿಕಾರಿ ಅಭಿಲಾಶ್ ಟಾಮಿ ಅವರನ್ನು ರಕ್ಷಿಸುವ ಪ್ರಯತ್ನ ನಡೆದಿದೆ ಎಂದು ನೌಕಾಪಡೆ ಹೇಳಿದೆ. ದೇಶೀಯವಾಗಿ ನಿರ್ಮಿಸಿದ್ದ ನೌಕೆ ತುರಿಯಾ ಈ ಸ್ಪರ್ಧೆಯಲ್ಲಿ ಭಾಗ. ವಹಿಸಿತ್ತು. ಈ ವೇಳೆ ವಿಪರೀತ ಚಂಡಮಾರುತಕ್ಕೆ ಸಿಲುಕಿದ ನೌಕೆಯ ಹಿಂಭಾಗಕ್ಕೆ ಹಾನಿ ಯಾಗಿದೆ. ಆಸ್ಟ್ರೇಲಿಯಾದ ಪರ್ತ್ನಲ್ಲಿರುವ 1900 ನಾಟಿಕಲ್ ಮೈಲು ದೂರದಲ್ಲಿ ಇವರ ನೌಕೆ ಹಾನಿಗೊಳಗಾಗಿದೆ. ಈ ಸ್ಪರ್ಧೆ ಜುಲೈ 1 ರಂದು ಆರಂಭವಾಗಿದ್ದು, ಈವರೆಗೆ ಒಟ್ಟು 10,500 ನಾಟಿಕಲ್ ಮೈಲು ಪ್ರಯಾಣಿಸಿ, ಮೂರನೇ ಸ್ಥಾನದಲ್ಲಿದ್ದಾರೆ.
ಐರ್ಲೆಂಡ್ನ ಗ್ರೆಗೋರ್ ಮೆಕ್ಗುಕಿನ್ ಹಾಗೂ ಎರಡನೇ ಸ್ಥಾನದಲ್ಲಿದ್ದ ಡಚ್ ನಾಗರಿಕ ಮಾರ್ಕ್ ಸ್ಲಾಟ್ಸ್ ನೌಕೆ ಕೂಡ ಹಾನಿಗೊಳಗಾಗಿದೆ. ಆದರೆ ಮೆಕ್ಗುಕಿನ್ ಮತ್ತು ಸ್ಲಾಟ್ಸ್ಗೆ ಯಾವುದೇ ಅಪಾಯವಾಗಿಲ್ಲ. ಜಗತ್ತನ್ನು ನೌಕೆಯಲ್ಲಿ ಸುತ್ತುಹಾಕುವ ಈ ಸಾಹಸದಲ್ಲಿ ಟಾಮಿ ಎರಡನೇ ಬಾರಿ ಭಾಗವಹಿಸುತ್ತಿದ್ದಾರೆ. ಒಟ್ಟು 30 ಸಾವಿರ ಮೈಲಿಯನ್ನು ಇವರು ಸಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Madhya Pradesh Rally; ಕೈಯಿಂದ ಮೀಸಲಾತಿ ಕಸಿಯುವ ಯತ್ನ: ಪ್ರಧಾನಿ ಮೋದಿ
Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್ ಗಾಂಧಿ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ