ಗರ್ಭ ನಿರೋಧಕ ಇಂಜೆಕ್ಷನ್ ವಿವಾಹಿತೆಯರಿಗೆ ಮಾತ್ರ ಇರಲಿ: ಬಿಜೆಪಿ ನಾಯಕ
Team Udayavani, Oct 17, 2018, 10:50 AM IST
ಹೊಸದಿಲ್ಲಿ : ಯುವತಿಯರ ಸುರಕ್ಷೆಯ ದೃಷ್ಟಿಯಿಂದ, ಎಫ್ಎಂ ರೇಡಿಯೋ ಸ್ಟೇಶನ್ಗಳಲ್ಲಿ ಗರ್ಭ ನಿರೋಧಕ ಇಂಜೆಕ್ಷನ್ ಬಗ್ಗೆ ಬರುತ್ತಿರುವ ಜಾಹೀರಾತುಗಳನ್ನು ತಡೆಯುವ ಅಗತ್ಯವಿದೆ ಎಂದು ದಿಲ್ಲಿ ಬಿಜೆಪಿ ವಕ್ತಾರ ಪ್ರವೀಣ್ ಕಪೂರ್ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
”ಸರಕಾರಿ ಆಸ್ಪತ್ರೆಗಳು ಗರ್ಭ ನಿರೋಧಕ ಇಂಜೆಕ್ಷಗಳನ್ನು ವಿವಾಹಿತ ಮಹಿಳೆಯರಿಗೆ ಮಾತ್ರವೇ ಶಿಫಾರಸು ಮಾಡುವಂತೆ ನಿರ್ದೇಶ ಹೊರಡಿಸಬೇಕು” ಎಂದು ಕಪೂರ್ ಅವರು ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
‘ಸಮಾಜದಲ್ಲಿ ಯುವಕ-ಯುವತಿಯರ ನಡುವೆ ವ್ಯಾಪಕ ಸೆಕ್ಸ್ ಸಂಬಂಧಗಳು ಇರುವ ಕಾರಣ ಮತ್ತು ಸೆಕ್ಸ್ ಉದ್ಯಮ ಮಾಫಿಯಾ ಯುವತಿಯರನ್ನು ಸೆಳೆಯುತ್ತಿರುವುದರಿಂದ “ಗಭ ನಿರೋಧಕ ಇಂಜೆಕ್ಷನ್’ಗಳ ಆಪಾಯದಿಂದ ಯುವ ಜನರನ್ನು ರಕ್ಷಿಸುವ ಅಗತ್ಯವಿದೆ’ ಎಂದು ಕಪೂರ್ ಹೇಳಿದ್ದಾರೆ.
“ನನ್ನ ಈ ಅಭಿಪ್ರಾಯಗಳು ಹಳೇ ಕಾಲದವುಗಳು ಎಂದು ಯಾರಿಗಾದರೂ ಅನ್ನಿಸಬಹುದು; ಆದರೆ ಯುವತಿಯರ ಆರೋಗ್ಯ ಮತ್ತು ಸುರಕ್ಷೆಯೇ ಈ ಅಭಿಪ್ರಾಯದ ಹಿಂದಿನ ಕಾಳಜಿಯಾಗಿದೆ. ಯುವತಿಯರು ಈ ಬಗೆಯ ಇಂಜೆಕ್ಷನ್ ಉಪಯೋಗಿಸುವ ಸಾಧ್ಯತೆ ಇರುವುದರಿಂದ ಅವರ ಆರೋಗ್ಯಕ್ಕೆ ಧಕ್ಕೆ ಒದಗುವುದು ನಿಶ್ಚಿತವಿದೆ” ಎಂದು ಕಪೂರ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು