CNG ತುಂಬುತ್ತಿದ್ದಾಗ ಆಟೋ ರಿಕ್ಷಾ ಟ್ಯಾಂಕ್ ಸ್ಫೋಟ; ಮೂವರಿಗೆ ಗಾಯ
Team Udayavani, Oct 20, 2018, 12:20 PM IST
ಮುಂಬಯಿ : ನಗರ ಹೊರವಲಯದ ಮಲಾಡ್ನಲ್ಲಿ ಸಿಎನ್ಜಿ ಇಂಧನ ತುಂಬುತ್ತಿದ್ದ ವೇಳೆ ಆಟೋ ರಿಕ್ಷಾ ಇಂಧನ ಟ್ಯಾಂಕ್ ಸ್ಫೋಟಗೊಂಡ ಪರಿಣಾಮ ಕನಿಷ್ಠ ಮೂವರು ಗಾಯಗೊಂಡ ಘಟನೆ ಇಂದು ಶನಿವಾರ ಬೆಳಗ್ಗೆ ನಡೆದಿದೆ.
ಮಲಾಡ್ ಪಶ್ಚಿಮದ ಎಸ್ ವಿ ರಸ್ತೆಯಲ್ಲಿನ ಮಿಲಾಪ್ ಟಾಕೀಸ್ ಸಮೀಪದ ಪೆಟ್ರೋಲ್ ಪಂಪ್ ನಲ್ಲಿ ಈ ದುರ್ಘಟನೆ ಇಂದು ಬೆಳಗ್ಗೆ 8 ಗಂಟೆಗೆ ನಡೆಯಿತು.
ಗಾಯಾಳುಗಳನ್ನು ಅನಿಲ್ ಮೋರೆ (57), ಸೋಹೇಲ್ ಶೇಖ್ (57) ಮತ್ತು ಶೈಲೇಶ್ ತಿವಾರಿ (25) ಎಂದು ಗುರುತಿಸಲಾಗಿದೆ. ಇವರನ್ನು ಕಾಂದಿವಿಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ಗಾಯಾಳುಗಳ ಪೈಕಿ ಇಬ್ಬರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಸ್ಫೋಟದ ಕಾರಣ ಏನೆಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು