ನ.14, 15ಕ್ಕೆ ದೀಪಿಕಾ, ರಣವೀರ್ ಮದುವೆ
Team Udayavani, Oct 22, 2018, 12:07 PM IST
ಮುಂಬಯಿ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (32) ಮತ್ತು ನಟ ರಣವೀರ್ ಸಿಂಗ್ (33) ಅವರ ಮದುವೆ ನ. 14 ಮತ್ತು 15ರಂದು ನಡೆಯಲಿದೆ. ಮೂಲಗಳ ಪ್ರಕಾರ ಇಟಲಿಯಲ್ಲಿ ಮದುವೆ ಸಮಾರಂಭ ನಡೆಯಲಿದ್ದು, ಆಪ್ತರಿಗಷ್ಟೇ ಆಹ್ವಾನ ನೀಡುತ್ತಾರೆಂದು ಹೇಳಲಾಗಿದೆ. ಹಿಂದಿ ಮತ್ತು ಇಂಗ್ಲಿಷ್ನಲ್ಲಿ ಆಹ್ವಾನ ಪತ್ರಿಕೆ ಮುದ್ರಣವಾಗಿದೆ.
ಇಬ್ಬರ ನಡುವಿನ ಸ್ನೇಹ ಪ್ರೇಮಕ್ಕೆ ತಿರುಗಿ, ಮದುವೆ ಆಗುತ್ತಿರುವುದಾಗಿ ಗಾಳಿ ಸುದ್ದಿಯಾದ ಸಾಕಷ್ಟು ದಿನಗಳ ಬಳಿಕ, ಸ್ವತಃ ಗುಳಿಕೆನ್ನೆ ಸುಂದರಿ ದೀಪಿಕಾ ಅವರೇ ಟ್ವಿಟರ್ನಲ್ಲಿ ಗಾಸಿಪ್ ಏನಿಲ್ಲ, ನಿಜ ಎಂದು ಖಚಿತಪಡಿಸಿದ್ದರು.
ಅಷ್ಟೇ ಅಲ್ಲ, ಇಬ್ಬರೂ ತಾರೆಯರು ಕಳೆದ ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚಟುವಟಿಕೆಯಿಂದ ತೊಡಗಿಸಿಕೊಂಡಿದ್ದು, ಇದೀಗ ಮದುವೆ ದಿನಾಂಕವೂ ಬಹಿರಂಗಗೊಂಡಿದೆ. ಇಟಲಿಯ ಪ್ರತಿಷ್ಠಿತ “ಲೇಕ್ ಕೊಮೊ’ದಲ್ಲಿ ಮದುವೆ ನಡೆಯಲಿದೆ ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ
Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್
Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್ ಸೋಂಕು ಅಂಟಿಕೊಂಡೀತು ಹುಷಾರು!
CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ
Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ